ಬಂಟ್ವಾಳದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಮತ್ತು ಬಂಟ್ವಾಳ ರಘರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ವಿದ್ಯಾಗಿರಿ ಸಂಯುಕ್ತಾಶ್ರಯದಲ್ಲಿ ಕಬ್ ಬುಲ್ ಬುಲ್ಸ್, ಸ್ಕೌಟ್ ಗೈಡ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಗೈಡ್ ಆಯುಕ್ತ ಬಿ.ಮಹಮ್ಮದ್ ತುಂಬೆ ಉದ್ಘಾಟಿಸಿದರು.ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಸುದರ್ಶನ್.ಬಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಎಮ್.ಡಿ.ಮಂಚಿ ಶುಭ ಹಾರೈಸಿದರು, ಎರಡೂ ಸಂಸ್ಥೆಯ ಪ್ರಾಂಶುಪಾಲರು,ಕಬ್ ಮಾಸ್ಟರ್‌ಗಳು ಪ್ಲಾಕ್ ಲೀಡರ್‌ಗಳು, ಸ್ಕೌಟ್ ಮಾಸ್ಟರ್‌ಗಳು ಮತ್ತು ಗೈಡ್ ಕ್ಯಾಪ್ಟನ್‌ಗಳು ಉಪಸ್ಥಿತರಿದ್ದರು