ಬಂಟ್ವಾಳದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀಯ ಸೇವಾ ಯೊಜನೆ ವತಿಯಿಂದ 10ನೇ ಆಯುರ್ವೇದ ದಿನಾಚರಣೆ ಹಾಗೂ ಎನ್ನೆಸ್ಸೆಸ್ ದಿನಾಚರಣೆ ನಡೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆ ಪ್ರಿನ್ಸಿಪಾಲ್ ನರಸಿಂಹ ಭಟ್ ಎಚ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ವಲಯ ತರಬೇತುದಾರ ಮತ್ತು ಪತ್ರಕರ್ತ ಸಂದೀಪ್ ಸಾಲ್ಯಾನ್ ಭಾಗವಹಿಸಿ, ಎನ್ಎಸ್ಎಸ್ ಮಹತ್ವವನ್ನು ತಿಳಿಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಭಾಸ್ಕರ್ ಎಲ್ ಪ್ರಾಸ್ತಾವಿಕವಾಗಿ ಮಾತಾಡಿ ಎನ್ಎಸ್ಎಸ್ ಮತ್ತು ಆಯುರ್ವೇದ ದಿನಾಚರಣೆ ಮಹತ್ವ ತಿಳಿಸಿದರು. ಸಭೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥರಾದ ಮೋಹನ್ ರಾಜ್ ಜಿ ಎಸ್, ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಉದಯ್ ಕುಮಾರ್, ಕಚೇರಿ ಅಧೀಕ್ಷಕರಾದ ಸುಧಾಕರ್ ಸಿ.ಎಸ್, ಕ್ರೀಡಾಧಿಕಾರಿ ರಿತಿಕಾ ಕೋಟ್ಯಾನ್ ಎಚ್, ಹಾಗೂ ಎನ್ಎಸ್ಎಸ್ ವಿದ್ಯಾರ್ಥಿ ನಾಯಕ ಸಿಂಚನ್ ಉಪಸ್ಥಿತರಿದ್ದರು. ಸ್ವಯಂ ಸೇವಕ ವಿದ್ಯಾರ್ಥಿಗಳಾದ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಸಿಂಚನ್ ಸ್ವಾಗತಿಸಿ, ಜಯಂತ್ ವಂದಿಸಿದರು.