ಬಂಟ್ವಾಳ: ಸುಭಾಸ್ ನಗರದ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ನಡೆಯಿತು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅವರು ವರದಿ ಸಾಲಿನಲ್ಲಿ299,18,08,796.78 ರೂ ವ್ಯವಹಾರ ನಡೆಸಿದ್ದು 48,94,76,396.10 ಠೇವಣಿ ಹಾಗೂ 42,12,58,138 ರೂಪಾಯಿ ಸಾಲ ನೀಡಿದ್ದು 15,00,000.74ಪೈಸೆ ನಿವ್ವಳ ಲಾಭ ಗಳಿಸಿರುತ್ತದೆ. ಸಂಘ ಖರೀದಿಸಿರುವ 50 ಸೆಂಟ್ಸ್ ಜಾಗದಲ್ಲಿ ಸಮುದಾಯ ಭವನ, ತರಬೇತಿ ಕೇಂದ್ರ ಆಡಳಿತ ಕಚೇರಿ ಯ ಕೆಲಸಗಳನ್ನು ಶೀಘ್ರವಾಗಿ ಆರಂಬಿಸುವ ಯೋಜನೆ ಇರುತ್ತದೆ ಎಂದು ಹೇಳಿ, ಸಂಘದ ಸದಸ್ಯರಿಗೆ 25 ಶೇ. ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.
ಉದ್ಘಾಟಿಸಿ ಮಾತಾಡಿದ ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕಿಗೆ ಬೆಳಕು ತೋರಿಸಿದವರು, ಸಮಾಜದ ಅಸ್ಪೃಶ್ಯೆ ತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.. ಅವರಿಗೆ ಕೈ ಮುಗಿದರೆ ನಮ್ಮೊಳಗಿನ ಪ್ರತಿಭೆ ಹೊರಬರಲು ಸಾಧ್ಯವಿದೆ ಎಂದು ತಿಳಿಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡ್ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು. ಇದೆ ಸಂದರ್ಭ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. 3 ಜನ ಹಿರಿಯ ಮೂರ್ತೆದಾರರಿಗೆ ಸನ್ಮಾನ, ಸಂಘ ಮಾಜಿ ನಿರ್ದೇಶಕರಾದ ಟಿ ಮುತ್ತಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ದಿವ್ಯಾoಗ ಬಾಲಕಿ ಮಾನ್ಯ ಇವರಿಗೆ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು. ಉಪಾಧ್ಯಕ್ಷರಾದ ವಿಠ್ಠಲ ಬೆಲ್ಚಾಡ ಚೇಳೂರು,ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಜಯಶಂಕರ್ ಕಾನ್ಸಾಲೆ, ಕೆ ಸುಜಾತ ಎಂ, ವಾಣಿ ವಸಂತ್, ಅರುಣ್ ಕುಮಾರ್ ಎಂ, ಆಶಿಶ್ ಪೂಜಾರಿ, ಚಿದಾನಂದ ಎಂ ಕಡೇಶ್ವಾಲ್ಯ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಜಿ ಚೇಳೂರು, ಲೆಕ್ಕಪತ್ರ ಮಂಡಿಸಿದರು. ಎ ಜಿ ಎಂ ಶಿಲ್ಪಾ ಬಿ ಸ್ವಾಗತಿಸಿದರು. ವೇಣೂರು ಶಾಖಾ ವ್ಯವಸ್ತಾಪಕಿ ವಿಜಯ ಕೆ ವಂದಿಸಿದರು. ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.