ಬಂಟ್ವಾಳ: ನರಿಕೊಂಬು ಗ್ರಾಮ ಶ್ರೀಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಸೆ. 22ರಂದು ಬ್ರಾಹ್ಮಿ ಮಹೂರ್ತದಲ್ಲಿ ಕ್ಷೇತ್ರ ತಂತ್ರಿಗಳಾದ ಕೇಶವ ಶಾಂತಿ ಗದ್ದುಗೆ ಏರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಕ್ಷೇತ್ರ ಅಧ್ಯಕ್ಷ ರಾಜ್ ಬಂಟ್ವಾಳ್ ದೀಪ ಬೆಳಗಿಸಿದರು. ಪದಾಧಿಕಾರಿಗಳಾದ ಸಂಜೀವ ಸಪಲ್ಯ, ಮನೋಜ್ ಕೇದಿಗೆ, ಕಿಶೋರ್ ಕಲ್ಯಾಣಾಗ್ರಹಾರ, ಪ್ರೇಮನಾಥ ಶೆಟ್ಟಿ ಅಂತರ , ಭುವನೇಶ್ವರ ಸಪಲ್ಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.