ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಮೂಡ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಸುಶೀಲಾ ಲಿಂಗಪ್ಪ ಅವರಿಗೆ ಶಿಕ್ಷಣದ ಮೂಲಕ ರಾಷ್ಟ್ರನಿರ್ಮಾಣ (ನೇಶನ್ ಬಿಲ್ಡರ್ ಅವಾರ್ಡ್) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಪ್ರಮುಖರಾದ ಪ್ರಕಾಶ್ ಕಾರಂತ್, ಬೇಬಿ ಕುಂದರ್, ಪ್ರಕಾಶ್ ಬಾಳಿಗಾ, ವಿಶ್ವನಾಥ ಶೆಟ್ಟಿ, ಕಿರಣ್ ಹೆಗ್ಡೆ, ಕೆ.ಎನ್.ಹೆಗ್ಡೆ, ಪ್ರತಿಭಾ ರೈ, ಮೊಹಮ್ಮದ್ ಯಾಸೀರ್, ಮುಖ್ಯ ಅತಿಥಿ ಮಂಗಳೂರು ಮೆಟ್ರೊ ರೋಟರಿ ಅಧ್ಯಕ್ಷೆ ಸುರೇಖಾ ಕಿಣಿ, ಆನ್ಸ್ ಕ್ಲಬ್ ಅಧ್ಯಕ್ಷೆ ಗೌರಿ ಶೆಣೈ, ಭಾರತಿ ಕುಂದರ್, ವಾಣಿ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.