ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ. ಮೂಡ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಶನಿವಾರ ಉದ್ಘಾಟಿಸಿದರು.
ಎನ್ನೆಸ್ಸಸ್ ಚಟುವಟಿಕೆಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ವಿದ್ಯಾರ್ಥಿಗಳು ಬದುಕಿನ ಕಷ್ಟಗಳು, ಹೊಂದಾಣಿಕೆಗಳನ್ನು ಇಂತಹ ಶಿಬಿರಗಳಿಂದ ಕಲಿತುಕೊಳ್ಳಬಹುದು ಎಂದು ಅವರು ಹೇಳಿದರು.
ಬಿ. ಮೂಡ ಪ.ಪೂ. ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯಶೋಧ ಮಧ್ವ, ಬೊಂಡಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಕುಲಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ರೇಖಾ ಸಿ. ಎಚ್.ಭಾಗವಹಿಸಿದ್ದರು. ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಹೇಮಾ ಕೆ ವಂದಿಸಿದರು. ಶಿಬಿರಾಧಿಕಾರಿ ದಾಮೋದರ್ ನಿರೂಪಿಸಿದರು. ಇನ್ನೊರ್ವ ಸಹಶಿಬಿರಾಧಿಕಾರಿ ಇರ್ಷಾದ್ ಸಹಕರಿಸಿದರು. ಉಪನ್ಯಾಸಕರಾದ ಲವೀನಾ ಶಾಂತಿ ಲೋಬೋ, ಸೌಮ್ಯ, ಭಾರತಿ, ಜಯಲೀಲಾ ಉಪಸ್ಥಿತರಿದ್ದರು.