ಮಂಗಳೂರು: ಮೂಡುಬಿದಿರೆ ತಾಲೂಕಿನ ಪಡುಕೊಡಾಜೆ ಗ್ರಾಮದ ಕೊಣಾಜೆಕಲ್ಲು ಎಂಬಲ್ಲಿಗೆ ಚಾರಣಕ್ಕೆ ಹೋಗಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ, ಇರ್ದೆ ಗ್ರಾಮದ ನಿವಾಸಿ ಮಂಗಳೂರಿನಲ್ಲಿ ಚಾರ್ಟೆಡ್ ಅಕೌಟೆಂಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ, ಮನೋಜ್ ಎನ್ (25) ಎಂಬುವರು ತನ್ನ ಸ್ನೇಹಿತರಾದ ಕಾರ್ತಿಕ್ ಎಂಬುವರೊಂದಿಗೆ ಈ ದಿನ ಬೆಳಿಗ್ಗೆ 6-20 ಗಂಟೆಗೆ ಮೂಡಬಿದ್ರೆ ತಾಲೂಕು, ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಎಂಬಲ್ಲಿಗೆ ಚಾರಣಕ್ಕೆ ಹೋಗಿದ್ದು, ಬೆಳಿಗ್ಗೆ ಸುಮಾರು 8-30 ಗಂಟೆಗೆ ಕೊಣಾಜೆ ಕಲ್ಲಿನ ತುದಿಗೆ ತಲುಪಿದ್ದಂತೆ ಮನೋಜ್ ಅಸ್ವಸ್ಥರಾಗಿದ್ದಾರೆ. ಈ ಸಂದರ್ಭ ಕೂಡಲೇ ಕಾರ್ತಿಕ್ ರವರು 108 ಅಂಬುಲೆನ್ಸ್ ಗೆ ಕರೆಮಾಡಿ ಮನೋಜ್ ಅವರನ್ನು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಸಹಾಯದೊಂದಿಗೆ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮನೋಜ್ ರವರು ಮೃತಪಟ್ಟಿರುವುದಾಗಿ ಘೋಷಿಸಿರುತ್ತಾರೆ. ಈ ಬಗ್ಗೆ ಮೃತ ಮನೋಜ್ ಎನ್ ಅವರ ತಂದೆ ತನ್ನ ಮಗ ಮನೋಜ್ ರವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದ್ದು ಎಂಬುದಾಗಿ ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.