ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಸಮುದಾಯದ ದಳ ಕಡೇಶಿವಾಲಯ, ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ, ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಇವುಗಳ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಕಡೇಶಿವಾಲಯದ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸನ ಶಿಬಿರ, ರಕ್ತದಾನ ಶಿಬಿರ, ಹೃದಯ ತಪಾಸಣಾ ಶಿಬಿರ, ಮೂಳೆ ತಪಾಸಣೆ ಗರ್ಭಕೋಶದ ಕ್ಯಾನ್ಸರ್ ತಪಾಸಣೆ, ಸಾಮಾನ್ಯ ರೋಗ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸುಮಾರು 300 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸುಮಾರು 70 ಜನ ಶಿಬಿರಾರ್ಥಿಗಳು ಬಿ. ಪಿ ತಪಾಸಣೆ, 100 ಜನ ಶಿಬಿರಾರ್ಥಿಗಳು ಶುಗರ್ ತಪಾಸಣೆ, 24 ಜನ ಶಿಬಿರಾರ್ಥಿಗಳು ಸಾಮಾನ್ಯ ಮತ್ತು ಹೃದಯ ತಪಾಸಣೆ, 15 ಮಂದಿ ಶಿಬಿರಾರ್ಥಿಗಳು ಮೂಳೆ ಚಿಕಿತ್ಸೆಯ ತಪಾಸಣೆ, 217 ಮಂದಿ ಶಿಬಿರಾರ್ಥಿಗಳು ಕಣ್ಣಿನ ಚಿಕಿತ್ಸೆಯ ತಪಾಸಣೆ ನಡೆಸಿ 154 ಮಂದಿ ಉಚಿತ ಕನ್ನಡಕವನ್ನು ಪಡೆದುಕೊಂಡರು..ಈ.ಸಿ.ಜಿ ತಪಾಸಣೆಯಲ್ಲಿ 30 ಮಂದಿ ಸ್ತ್ರೀ ರೋಗ ತಪಾಸಣೆಯಲ್ಲಿ 12 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.ರಕ್ತದಾನ ಶಿಬಿರದಲ್ಲಿ ಸುಮಾರು 52 ಮಂದಿ ರಕ್ತದಾನ ಮಾಡಿ ಸಹಕರಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೊಟ್ಟು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಟೀಮ್ ದಕ್ಷಿಣ ಕಾಶಿ ಉಪ್ಪಿನಂಗಡಿ ಅಧ್ಯಕ್ಷ ಪ್ರಸನ್ನ ಕುಮಾರ್ ಪೆರಿಯಡ್ಕ, ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಗೌರವಾಧ್ಯಕ್ಷ ಜಯರಾಮ ರೈ ಪಾಚುಕೋಡಿ, ರೋಟರಿ ಸಮುದಾಯ ದಳ ಕಡೇಶಿವಾಲಯ ಅಧ್ಯಕ್ಷ ರತ್ನಾಕರ ನಾಯ್ಕ ಪ್ರತಾಪನಗರ, ಜಿ.ವಿ.ಫ್ರೆಂಡ್ಸ್ ಕಡೇಶಿವಾಲಯ ಅಧ್ಯಕ್ಷ ಚಂದ್ರೋದಯ ಕುಲಾಲ್, ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಆಧ್ಯಕ್ಷ ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು, ಕಡೇಶಿವಾಲಯ ಶಾಲಾ ಮುಖ್ಯೋಪಾಧ್ಯಾಯ ಬಾಬು ಮಾಸ್ತರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ರಾವ್ ನೆಕ್ಕಿಲಾಡಿ, ಎ.ಜೆ.ಆಸ್ಪತ್ರೆ ವೈದ್ಯ ಡಾ. ವಾಮನ ನಾಯಕ್, ಶಿಬಿರದ ಮುಖ್ಯ ನಿರ್ವಾಹಕ ಗೋಪಾಲಕೃಷ್ಣ, ರೋಟರಿ ಸಮುದಾಯದಳದ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳದ ಸಲಹಾ ಸಮಿತಿಯ ಸದಸ್ಯರಾದ ಸತೀಶ್ಚಂದ್ರ ಶೆಟ್ಟಿ ಭಾವಗುತ್ತು ಸ್ವಾಗತಿಸಿದರು. ಪೂವಪ್ಪ ಮುಂಡಾಲ ವಂದಿಸಿದರು. ಯೋಗೀಶ್ ನಾಯ್ಕ್ ದಾಳಿಂಬ ಕಾರ್ಯಕ್ರಮ ನಿರೂಪಿಸಿದರು.