ಬಂಟ್ವಾಳ: ಮಂಗಳವಾರ ಸೆ.16ರಂದು ಬಂಟ್ವಾಳ ತಾಲೂಕಿನ ಕೆಲ ಭಾಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಈ ಕುರಿತು ಮೆಸ್ಕಾಂ ಪ್ರಕಟಣೆಯನ್ನು ಹೊರಡಿಸಿದೆ. ಸೆ.16ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ 110/33/11 ಕೆವಿ ಬಂಟ್ವಾಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ತುಂಬೆ ಮತ್ತು ಸಜೀಪಮುನ್ನೂರು ವಾಟರ್ ಸಪ್ಲೈ ಫೀಡರ್, 35 ಕೆವಿ ವಿದ್ಯುತ್ ಫೀಡರ್ ಹಾಗೂ 11 ಕೆವಿ ಫೀಡರ್ ಗಳಿಂದ ಹೊರಡುವ ಬಿ.ಸಿ.ರೋಡ್ ನಗರ, ತುಂಬೆ, ಕಳ್ಳಿಗೆ, ಪುದು, ಮೇರಮಜಲು, ಫರಂಗಿಪೇಟೆ, ಸಜಿಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.