ಬಂಟ್ವಾಳ :ತಾಲೂಕಿನ ಪ್ರತಿಷ್ಠಿತ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಸೇವಾಭಾರತಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವು ಸೆ.14ರಂದು ಆದಿತ್ಯವಾರ ನೆತ್ತರಕೆರೆಯ ದಿ.ವಿಠ್ಠಲ ಶೆಟ್ಟಿ ಮುಂಡಾಜೆಗುತ್ತು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸೇವಾಭಾರತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಹಿರಿಯ ವಕೀಲ ರಮೇಶ ಉಪಾಧ್ಯಯ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮನುಷ್ಯನ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವ ವ್ಯವಸ್ಥೆ ಇದೆ,ಇನ್ನೊಬ್ಬರ ಜೀವ ಉಳಿಸುವ ರಕ್ತದಾನದಂತಹ ಶ್ರೇಷ್ಠ ಸೇವಾ ಚಟುವಟಿಕೆಯನ್ನು ಆಯೋಜಿಸಿದ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶುಭ ಹಾರೈಸಿದರು.
ಕೆ ಎಂ ಸಿ ಹಾಸ್ಪಿಟಲ್ ಮಂಗಳೂರು ಇದರ ಬ್ಲಡ್ ಸೆಂಟರ್ ನ ಜೂನಿಯರ್ ಎಕ್ಸಿಕ್ಯೂಟಿವ್ ಡಾ ರಾಘವೇಂದ್ರ ಅವರು ರಕ್ತದಾನದ ಮಹತ್ವ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಶ್ರಾವ್ಯ ಗೋ ಮಂದಿರ ಹೊಳ್ಳರಬೈಲು ಇಲ್ಲಿನ ನಾರಾಯಣ ಹೊಳ್ಳ ನೆತ್ತರಕೆರೆಗುತ್ತು ಹಾಗೂ ಕಟ್ಟಡ ಗುತ್ತಿಗೆದಾರ ಅಶ್ವಿನ್ ಮುಂಡಾಜೆ ಇವರು ರಕ್ತದಾನಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ನೆತ್ತರಕೆರೆ, ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಬಬಿತಾ ಅಶ್ವಿನ್ ವೇದಿಕೆಯಲ್ಲಿದ್ದರು.
ಪ್ರಮುಖರಾದ ಸುರೇಶ ಭಂಡಾರಿ ಅರ್ಬಿ, ಸಂತೋಷ್ ಕುಮಾರ್, ಜಗದೀಶ ಬಂಗೇರ, ವಿಶ್ವನಾಥ ಕುಲಾಲ್, ಸುರೇಶ ಕುಲಾಲ್, ಮಹೇಶ್ ಎನ್, ರಂಜಿತ್, ಮೋಹನ್ ಕುಲಾಲ್, ಮೋಹನ್ ಆಚಾರಿ, ಹರಿನಾಕ್ಷಿ ಸದಾನಂದ, ಸವಿತಾ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು.
ಸೇವಾಭಾರತಿ ಬಂಟ್ವಾಳ ತಾಲೂಕು ಇದರ ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿ ಧನ್ಯವಾದವಿತ್ತರು, ನವೋದಯ ಮಿತ್ರ ಕಲಾ ವೃಂದದ ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸುಮಾರು 53ಮಂದಿ ರಕ್ತದಾನ ಮಾಡಿದರು