ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಆಚರಣೆಗಳು ಸೆ.22ರಿಂದ ಆರಂಭಗೊಂಡು ಅಕ್ಟೋಬರ್ 2ರವರೆಗೆ ನಡೆಯಲಿದೆ.
ಸೆ,26ರಂದು ಲಲಿತಾ ಪಂಚಮಿ ಪ್ರಯುಕ್ತ ಚಂಡಿಕಾಯಾಗ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಯಾಗ ಾರಂಭವಾಗಲಿದೆ. ಮಧ್ಯಾಹ್ನ ಶ್ರೀದೇವಿಗೆ ವಿಶೇಷ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ. ಅಕ್ಟೋಬರ್ 2ರಂದು ವಿಜಯದಶಮಿ ಪ್ರಯುಕ್ತ ಮಂಗಳವಾದ್ಯ ಘೋಷದೊಂದಿಗೆ ತೆನೆಪೂಜೆ, ವಿತರಣೆ ಬೆಳಗ್ಗೆ 9ಕ್ಕೆ ನಡೆಯುವುದು. ಬೆಳಗ್ಗೆ 10ಕ್ಕೆ ವಿದ್ಯಾರಂಭ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ 8ರವರೆಗೆ ವಿವಿಧ ಸಂಘಗಳಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಚಂಡಿಕಾಪರಮೇಶ್ವರಿ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಲೋಕನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.