ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ) ವತಿಯಿಂದ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ ೧೭೧ನೇ ಜನ್ಮದಿನಾಚರಣೆ ಸೆ.14ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ ಹೀಗಿದೆ.
ಬೆಳಗ್ಗೆ 7ರಿಂದ 10ರವರೆಗೆ ಭಜನೆ. ಭಾಗವಹಿಸುವ ತಂಡಗಳು: ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ, ಪಚ್ಚಿನಡ್ಕ, ನಾಗಶ್ರೀ ಭಜನಾ ಮಂಡಳಿ, ತೆಂಕಬೆಳ್ಳೂರು. ಬೆಳಗ್ಗೆ 10ರಿಂದ ಗುರುಪೂಜೆ, 10.30ಕ್ಕೆ ಮಹಾಪೂಜೆ, ಪೂರ್ವಾಹ್ನ 11ಕ್ಕೆ: ಸಭಾ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವಹಿಸುವರು. ಪ್ರಾಸ್ತಾವಿಕವಾಗಿ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಲಿದ್ದಾರೆ.
ಈ ಸಂದರ್ಭ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಯೋಗೀಶ್ ಕೈರೋಡಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಮಂಗಳೂರು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ಎಚ್.ಎಸ್.ಜಯರಾಜ್ ಕುದ್ರೋಳಿ ಭಾಗವಹಿಸುವರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಗುವುದು. ಕಂಬಳ ಕ್ಷೇತ್ರದಲ್ಲಿ ಸತೀಶ್ಚಂದ್ರ ಇರುವೈಲು ಧಾರ್ಮಿಕ ಕ್ಷೇತ್ರದಲ್ಲಿ ಶಂಭೂರಿನ ದಕ್ಷಿಣದ ಶ್ರೀ ಶಿರ್ಡಿ ಸಾಯಿ ಬಾಬಾ ಮಂದಿರ ಮೂಲಕ ಗಮನ ಸೆಳೆದ ಸೂರಜ್, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಸಿರುದಳ ಮಂಗಳೂರಿನ ನಾಗರಾಜ್ ಅಂಚನ್ ಅವರನ್ನು ಸನ್ಮಾನಿಸಲಾಗುತ್ತದೆ. ಮಧ್ಯಾಹ್ನ ಗಂಟೆ 1,30ರಿಂದ: ಅನ್ನಸಂತರ್ಪಣೆ ಮಧ್ಯಾಹ್ನ 2ರಿಂದ: ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಹಾಗೂ ಯುವವಾಹಿನಿ (ರಿ) ಬಂಟ್ವಾಳ ಘಟಕ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉಪಾಧ್ಯಕ್ಷರಾಗಿ ಜಯಪ್ರಕಾಶ್ ಜೆ.ಎಸ್.ಜಕ್ರಿಬೆಟ್ಟು, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿಯಾಗಿ ಸುನಿಲ್ ಎನ್.ಕುಂದರ್, ಜತೆಕಾರ್ಯದರ್ಶಿಯಾಗಿ ಆನಂದ ಸಾಲಿಯಾನ್ ಶಂಭೂರು, ಲೆಕ್ಕಪರಿಶೋಧಕರಾಗಿ ಪ್ರಶಾಂತ್ ಕೋಟ್ಯಾನ್ ಕಾರ್ಯನಿರ್ವಹಿಸುತ್ತಿದ್ದಾರೆ.