ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಯುವ ವೇದಿಕೆಯ ಸ್ಥಾಪಕ ಸದಸ್ಯರು, ಬಂಟ್ವಾಳ ತಾಲೂಕು ಕುಲಾಲ ಸಂಘದ ಮಾಜಿ ಅಧ್ಯಕ್ಷರು, ನಿವೃತ್ತ ಶಿಕ್ಷಕರಾದ ಬಿ.ಲಿಂಗಪ್ಪ ಮಾಸ್ಟರ್ ರವರಿಗೆ ಅವರ ಸ್ವಗೃಹದಲ್ಲಿ ಅವರ ಪತ್ನಿ ಸುಶೀಲಾ ಟೀಚರ್ ಮತ್ತು ಪುತ್ರ ಸೃಜನ್ ಉಪಸ್ಥಿತಿಯಲ್ಲಿ ಗುರುವಂದನೆಯ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭ ಯುವ ವೇದಿಕೆ ಸ್ಥಾಪಕಧ್ಯಕ್ಷ ಆನಂದ ಮಿತ್ತಪರಾರಿ, ಅಧ್ಯಕ್ಷರಾದ ಸುಮೀತ್ ಸೊರ್ನಾಡು, ಗೌರವಾಧ್ಯಕ್ಷ ಎಚ್ಕೆ ನಯನಾಡು, ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು, ಮಹಿಳಾ ಸಂಚಾಲಕಿ ದುರ್ಗಾ ಪ್ರದೀಪ್, ರಾಮಚಂದ್ರ ದೈಪಲ, ಸೌಮ್ಯ ಸುಕುಮಾರ್, ಮೀನಾಕ್ಷಿ ತುಂಬೆ, ಸಾಧ್ವಿ ಸುಕುಮಾರ್, ಕೌಶಿಕ್ ರಾಮಚಂದ್ರ ಉಪಸ್ಥಿತರಿದ್ದರು. ಸುಕುಮಾರ್ ಬಂಟ್ವಾಳ ಸಂಧರ್ಭೊಚಿತವಾಗಿ ಮಾತನಾಡಿದರು, ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.