ಬಿ.ಸಿ.ರೋಡ್ ಹೃದಯಭಾಗದಲ್ಲೇ ಇರುವ ರೈಲ್ವೆ ಫ್ಲೈಓವರ್ ನಲ್ಲಿ ಅಗಲವಾದ ಹೊಂಡಗಳು ಬಾಯ್ದೆರೆದಿದ್ದು, ವಾಹನ ಸವಾರರನ್ನು ಕಂಗೆಡಿಸುತ್ತಿವೆ. ಹಾಗೆಯೇ ಫ್ಲೈಓವರ್ ನ ಪಕ್ಕ (ಬಿ.ಸಿ.ರೋಡ್ ಬಸ್ ನಿಲ್ಲುವ ಜಾಗದ ಎದುರು) ಪ್ಯಾಚ್ ವರ್ಕ್ ಮಾಡಿದರೂ ಹೊಂಡ ಮತ್ತೆ ಜನ್ಮತಾಳುತ್ತಿರುವುದು ವಿಶೇಷ. ಹೆದ್ದಾರಿ ನಿರ್ವಹಣೆ ಸಂಬಂಧಿಸಿದ ಇಲಾಖೆಗಳು ಈ ಕುರಿತು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.