ಬಿಜೆಪಿಯ ಅಮ್ಟೂರು ಶಕ್ತಿಕೇಂದ್ರ, ಗೋಳ್ತಮಜಲು ಭಾರತೀಯ ಜನತಾ ಪಾರ್ಟಿಯು ಅಮ್ಟೂರು ಶಕ್ತಿಕೇಂದ್ರ ಗೋಳ್ತಮಜಲು ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದ ಸಭಾಂಗಣದಲ್ಲಿ ನಡೆದಿದ್ದು, ಇದರ ಸಮಾರೋಪ ಸಮಾರಂಭ ನೆರವೇರಿತು
ಬಿಜೆಪಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಬೇಕು ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ವಿಕಸಿತ ಭಾರತ ಕುರಿತು ಬೂತ್ ಮಟ್ಟದಲ್ಲಿ ಪ್ರೇರಣೆ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು. ದೇವಪ್ಪ ಪೂಜಾರಿ, ವಕ್ತಾರರಾದ ಡೊಂಬಯ್ಯ ಅರಳ, ಶಕ್ತಿಕೇಂದ್ರದ ಪ್ರಮುಖರಾದ ಹಿರಿಯ ಕಾರ್ಯಕರ್ತರಾದ ವಿಠಲ ಪ್ರಭು ಕೇಶವನಗರ. ಚಂದ್ರಶೇಖರ ಟೈಲರ್ ಗೋಳ್ತಮಜಲು. ಗೋಪಾಲ ಪೂಜಾರಿ ಅಮ್ಟೂರು. ಶಕ್ತಿ ಕೇಂದ್ರದ ಪ್ರಮುಖರಾದ ಗೋಪಾಲಕೃಷ್ಣ ಪೂವಳ. ನವೀನ್ ಗಟ್ಟಿ ನೆಟ್ಲ. ಜಿಲ್ಲಾ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ. ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರೇಮ ಗುರುವಪ್ಪ, ಹೀರಣ್ಮಯಿ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಲಖಿತ ಆರ್ ಶೆಟ್ಟಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿನರಾಜ್ ಕೋಟ್ಯಾನ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶರತ್ ಬಿ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು
ರಾಜೇಶ್ ಕೊಟ್ಟಾರಿ ನಿರೂಪಿಸಿ ವಂದಿಸಿದರು