ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಬಿ.ಸಿ.ರೋಡ್ ನಲ್ಲಿ ಪೂಜಿಸಲಾದ ಗಣೇಶನ ಶೋಭಾಯಾತ್ರೆ ಶನಿವಾರ ರಾತ್ರಿ ನಡೆಯಿತು.
ಟ್ಯಾಬ್ಲೊ, ಹುಲಿವೇಷ ಸಹಿತ ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ ಹಲವು ಪ್ರದರ್ಶನಗಳು ನಡೆದವು. ಮಳೆಯ ನಡುವೆಯೂ ನಡೆದ ಆಕರ್ಷಕ ಮೆರವಣಿಗೆಯ ಸಂದರ್ಭ ಬಿ.ಸಿ.ರೋಡ್ ಕೈಕಂಬದ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಗಣಪತಿಗೆ ಬೃಹತ್ ಗಾತ್ರದ ಖರ್ಜೂರ ಹಾರವನ್ನು ಸಂಘದ ಅಧ್ಯಕ್ಷ ಸದಾಶಿವ ಕೈಕಂಬ ನೇತೃತ್ವದಲ್ಲಿ ಅರ್ಪಿಸಲಾಯಿತು.
OPTIC WORLD