ಬಂಟ್ವಾಳ ಕೃಷಿ ಇಲಾಖೆ ಮುಂಭಾಗ ಕಾವಳಮೂಡೂರು ಗ್ರಾಮದ ಪುಂಡಿಕ್ಕು ನಿವಾಸಿ ರೈತ ಗಣೇಶ್ ದೇವಾಡಿಗ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪವರ್ ಟಿಲ್ಲರ್ ಅನ್ನು ಶುಕ್ರವಾರ ವಿತರಿಸಿದರು.
14 ಎಚ್.ಪಿ. ಟಿಲ್ಲರ್ ನ ಒಟ್ಟು ಬೆಲೆ 2,11.500 ರೂ ಆಗಿದ್ದು, 82,500 ರೂ ಸಹಾಯಧನವನ್ನು ಫಲಾನುಭವಿ ರೈತರಿಗೆ ಕೃಷಿ ಇಲಾಖೆಯಿಂದ ಸೌಲಭ್ಯದ ಮೂಲಕ ಒದಗಿಸಲಾಯಿತು. ಈ ಸಂದರ್ಭ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್, ಕೃಷಿ ಅಧಿಕಾರಿ ನಂದನ್ ಶೆಣೈ, ಕಚೇರಿ ಅಧೀಕ್ಷಕರಾದ ಮೀನಾಕ್ಷಿ, ಆತ್ಮ ಯೋಜನೆ ಬಿಟಿಎಂ ದೀಕ್ಷಾ, ಎಟಿಎಂ ಹನುಮಂತ ಕಾಳಗಿ, ರೈತ ಸಂಪರ್ಕ ಕೇಮದ್ರದ ಅಕೌಂಟೆಂಟ್ ದೀಪ್ತಿ, ಲಾವಣ್ಯ, ಕಚೇರಿ ಸಿಬ್ಬಂದಿ ಸಂದೀಪ್, ಯಶೋಧಾ, ದಿವ್ಯಾ, ತ್ರಿನೇತ್ರ ಮೊದಲಾದವರು ಉಪಸ್ಥಿತರಿದ್ದರು.
OPTIC WORLD