ಅಮ್ಟಾಡಿ ಗ್ರಾಮದ ಪೆದಮಲೆ ಎಂಬಲ್ಲಿ ಬಂಟ್ವಾಳ- ಸಿದ್ದಕಟ್ಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬದಿಯಲ್ಲಿ ಮಣ್ಣು ಕುಸಿದಿದೆ.
ಮೂಡ ನಡುಗೋಡು ಗ್ರಾಮದ ದಂಡೆ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ಎಂಬವರ ಕಚ್ಚಾ ಮನೆ ಮಳೆಯಿಂದ ತೀವ್ರ ಹಾನಿಯಾಗಿರುತ್ತದೆ. ಅವರು ಪಕ್ಕದಲ್ಲೇ ಇರುವ ಸಹೋದರನ ಮನೆಗೆ ಸ್ಥಳಾಂತರಗೊoಡಿರುತ್ತಾರೆ. ಮಳೆಯಿಂದಾಗಿ ಹಲವೆಡೆ ಸಮಸ್ಯೆಗಳು ತಲೆದೋರಿದ್ದು, ಹಲವೆಡೆ ರಸ್ತೆಗಳು ಬ್ಲಾಕ್ ಆದ ಘಟನೆಯೂ ನಡೆಯಿತು