ಕವರ್ ಸ್ಟೋರಿ

Bantwal Railway Station: ಬಂಟ್ವಾಳ ರೈಲ್ವೆ ನಿಲ್ದಾಣ ಹೇಗಿದೆ ಅಭಿವೃದ್ಧಿ?

Photo: Satish, Kartik Studio, B.C.Road

ಅಮೃತ ಭಾರತ್‌ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದುಕೊಂಡಿದೆ. 28.49 ಕೋಟಿ ರೂ. ವೆಚ್ಚದಲ್ಲಿ ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತಿದೆ. 2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್‌ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್‌ಕುಮಾರ್‌ಕಟೀಲ್‌ಮತ್ತು ಶಾಸಕ ರಾಜೇಶ್‌ನಾಯ್ಕ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಮೊದಲ ಹಂತದ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇನ್ನು ಮೂರು, ನಾಲ್ಕು ತಿಂಗಳೊಳಗೆ ಯೋಜನೆಯಲ್ಲಿದ್ದ ಎಲ್ಲ ಕೆಲಸಗಳೂ ಕಂಪ್ಲೀಟ್ ಆಗುವ ನಿರೀಕ್ಷೆ ಇದೆ.

Photo: Satish, Kartik Studio, B.C.Road

28.49 ಕೋಟಿ ರೂ.ಗಳಲ್ಲಿ ಏನೇನು ನಡೆಯುತ್ತಿದೆ?

ಜಾಹೀರಾತು

ಮುಂಗಡ ಬುಕ್ಕಿಂಗ್‌ಸಹಿತ ಟಿಕೆಟ್‌ಕೌಂಟರ್‌ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್‌ರೂಮ್‌ಗೆ ವ್ಯವಸ್ಥೆ, ಒಂದು ಕೆಫೆಟೀರಿಯಾ, ನಾಲ್ಕು ಕ್ಯಾಟರಿಂಗ್‌ಸ್ಟಾಲ್‌ಗಳು, ಪ್ರತಿಯೊಂದು ಪ್ಲಾಟ್‌ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೇಶನ್‌ಕಟ್ಟಡಕ್ಕೆ ಗ್ರಾನೈಟ್‌ನೆಲಹಾಸು, ಇತರ ಭಾಗಕ್ಕೆ ಕಾಂಕ್ರೀಟ್‌ಮತ್ತು ಟೈಲ್ಸ್‌ಅಳವಡಿಕೆಯಾಗಿದೆ. ಇಡೀ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್‌.ಇ.ಡಿ. ಡಿಸ್‌ಪ್ಲೇ ಮೂಲಕ ರೈಲುಗಳು ಬಂದು ಹೋಗುವ ಕುರಿತ ಮಾಹಿತಿ, ಕೋಚ್‌ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ್‌ಪ್ಲೇ ಬೋರ್ಡ್‌ಅಳವಡಿಕೆ, ಸ್ಟೇಶನ್‌ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿದ್ದು, ಇನ್ನೂ ಆಗಬೇಕಷ್ಟೇ. ಈಗಾಗಲೇ ರೈಲು ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್‌ರೈಲು ಓಡಾಟ ಆರಂಭಗೊಂಡರೆ, ನಿಲ್ದಾಣದಲ್ಲಿ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ. ಈಗಾಗಲೇ ಫೂಟ್ ಓವರ್ ಬ್ರಿಜ್ ಇದ್ದು, ಇನ್ನು ಲಿಫ್ಟ್ ಅಳವಡಿಕೆ ಕೆಲಸ ಆಗಬೇಕಾಗಿದೆ. ರೈಲ್ವೆ ನಿಲ್ದಾಣದ ಪ್ರವೇಶದಲ್ಲಿ ವಾಹನ ಪಾರ್ಕಿಂಗ್ ಹಾಗೂ ಹುಲ್ಲುಗಾವಲು ವ್ಯವಸ್ಥೆ ಅಂತಿಮ ಹಂತದಲ್ಲಿದೆ. ಎಡರನೇ ಪ್ಲಾಟ್ ಫಾರ್ಮ್ ಕೂಡ ಸುಸಜ್ಜಿತವಾಗುವ ಹಂತದಲ್ಲಿದೆ.

Photo: Satish, Kartik Studio, B.C.Road

ಸುರಕ್ಷತೆಗೆ ಪೊಲೀಸರು:

ಇತ್ತೀಚೆಗೆ ಅಧಿಕಾರಿಗಳ ಭೇಟಿ ಸಂದರ್ಭ ಸಾರ್ವಜನಿಕರ ಮನವಿ ಮೇರೆಗೆ ಪೊಲೀಸ್ ಸಿಬ್ಬಂದಿ ಸುರಕ್ಷತೆಗೆ ನಿಯುಕ್ತರಾಗಿದ್ದಾರೆ. ಅನಧಿಕೃತವಾಗಿ ಪ್ಲಾಟ್ ಫಾರ್ಮ್ ಗಳಲ್ಲ ಸಂಚರಿಸುವುದು, ಅನುಮಾನಾಸ್ಪದವಾಗಿ ನಡೆದಾಡುತ್ತಿರುವುವವರನ್ನು ಹಿಡಿದು ವಿಚಾರಿಸುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯದಂತೆ ಗಮನಹರಿಸಲು ಆರಂಭಿಸಿದ್ದಾರೆ.

OPTIC WORLD

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.