ಬಂಟ್ವಾಳ: ಜಿಲ್ಲೆಯ ಹೆಸರಾಂತ ಪಾಕತಜ್ಞ ಕೊಕ್ಕಪುಣಿ ಕೃಷ್ಣ ಕಾರಂತ (90) ಆಗಸ್ಟ್ 23ರಂದು ರಾತ್ರಿ ಕಲ್ಲಡ್ಕದ ಸ್ವಗೃಹದಲ್ಲಿ ನಿಧನರಾದರು. ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. 2014ರಲ್ಲಿ ಸಾಲೆತ್ತೂರು-ಕೊಲ್ನಾಡು ಲಯನ್ಸ್ ಕ್ಲಬ್ ವತಿಯಿಂದ ‘ಪಾಕ ಪ್ರವೀಣ’ ರೆಂದು ಬಿರುದು ನೀಡಿ ಅವರನ್ನು ಸನ್ಮಾನಿಸಲಾಗಿತ್ತು. 2019ರಲ್ಲಿ ಪಾಣೆಮಂಗಳೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನೀಡಲಾದ ಪ್ರಶಸ್ತಿಯಂತೆ ‘ಹಿರಿಯ ಪಾಕತಜ್ಞರೆಂದು ಗುರುತಿಸಿ ಸನ್ಮಾನಿಸಲಾಗಿತ್ತು. ಮನೆಗೆ ಅಪಾರ ಬಂಧು ಬಳಗದವರು, ಊರಿನ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
OPTIC WORLD