OPTIC WORLD
ಕರಾವಳಿಗೆ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ರೈಲ್ವೆ ಇಲಾಖೆಯಿಂದ ಬಂಪರ್ ರೈಲು ಸೇವೆಗಳನ್ನು ಒದಗಿಸಲಾಗಿದೆ ಎಂದು ದಕ್ಷಿಣ ಕನ್ನಡ ರೈಲ್ವೆ ಬಳಕೆದಾರರ ಸಮಿತಿ ಮಾಹಿತಿ ನೀಡಿದೆ.
ನೈರುತ್ಯ ರೈಲ್ವೆ ವಲಯ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಮಂಗಳೂರಿಗೆ ಹಾಗು ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಓಡಿಸುತ್ತಿದೆ
ದಿನಾಂಕ 25/08/2025 ಸೋಮವಾರ ರೈಲು ಸಂಖ್ಯೆ 06251 ಯಶವಂತಪುರ ಜಂ.-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ 26/08/2025 ಮಂಗಳವಾರ ಬೆಳಗ್ಗೆ 11:45ಕ್ಕೆ ಮಂಗಳೂರಿನ ಮಂಗಳೂರು ಸೆಂಟ್ರಲ್ ತಲುಪಲಿದೆ.
ಅದೇ ದಿನ ಅಂದರೆ ದಿನಾಂಕ 26/08/2025 ಮಂಗಳವಾರ ರೈಲು ಸಂಖ್ಯೆ 06252 ಮಂಗಳೂರು ಸೆಂಟ್ರಲ್-ಯಶವಂತಪುರ ಜಂ. ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲಿನಿಂದ ಮಧ್ಯಾಹ್ನ 1ಗಂಟೆಗೆ ಹೊರಟು ರಾತ್ರಿ 10:40ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಮತ್ತೊಂದು ವಿಶೇಷ ರೈಲು ರೈಲು ಸಂಖ್ಯೆ 06253 ಯಶವಂತಪುರ ಜಂ.-ಮಂಗಳೂರು ಸೆಂಟ್ರಲ್ ವಿಶೇಷ ರೈಲು 26/08/2025ರಂದು ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ 27/08/2025 ಬುಧವಾರ ಬೆಳಗ್ಗೆ 11:45ಕ್ಕೆ ಮಂಗಳೂರಿನ ಮಂಗಳೂರು ಸೆಂಟ್ರಲ್ ತಲುಪಲಿದೆ.ಅದೇ ದಿನ ಅಂದರೆ ದಿನಾಂಕ 27/08/2025 ಮಂಗಳವಾರ ರೈಲು ಸಂಖ್ಯೆ 06254 ಮಂಗಳೂರು ಸೆಂಟ್ರಲ್-ಯಶವಂತಪುರ ಜಂ. ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲಿನಿಂದ ಮಧ್ಯಾಹ್ನ 2:15ಕ್ಕೆ ಹೊರಟು ರಾತ್ರಿ 11:30ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಸೆಂಟ್ರಲ್ ಹಾಗು ಯಶವಂತಪುರ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ರೈಲಿನಲ್ಲಿ 5 ಜನರಲ್ ಕೋಚ್,2 ಸಿಟ್ಟಿಂಗ್ ಕಮ್ ಲಗೇಜ್ ಕೋಚ್, 12 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ ಕೋಚುಗಳು ಇರಲಿದೆ.
ಇದರ ಜೊತೆಗೆ 26/08/2025ರಂದು ಬೆಂಗಳೂರು ಹಾಗು ಕಾರವಾರ ಮಧ್ಯೆ ಪಡೀಲು ಬೈಪಾಸ್ ಮಾರ್ಗವಾಗಿ ರೈಲು ಸಂಖ್ಯೆ 06569/70 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಾರವಾರ ವಿಶೇಷ ರೈಲು ಓಡಿಸುತ್ತಿದೆ.
ಹೀಗಾಗಿ ಗಣೇಶ ಚತುರ್ಥಿ ಹಬ್ಬಕ್ಕೆ ಊರಿಗೆ ಬರುವವರು ಈ ರೈಲುಗಳಲ್ಲಿ ಬಂದು ಮರಳಿ ರೈಲು ಸಂಖ್ಯೆ 06522/24 ಮಂಗಳೂರು ಸೆಂಟ್ರಲ್- ಯಶವಂತಪುರ ಜಂ. ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಬಹುದು.
ಈಗಾಗಲೇ 06521/23 ಯಶವಂತಪುರ ಜಂಕ್ಷನ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಟಿಕೇಟು ಬುಕ್ಕಿಂಗ್ ಆರಂಭಗೊಂಡಿದೆ. ಶೀಘ್ರದಲ್ಲಿ ರೈಲು ಸಂಖ್ಯೆ 06522/24 ಮಂಗಳೂರು ಸೆಂಟ್ರಲ್-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಟಿಕೇಟು ಬುಕ್ಕಿಂಗ್ ಕೂಡ ಆರಂಭಗೂಳ್ಳಲಿದೆ.
ಕೆಲವು ದಿನಗಳ ಹಿಂದೆ ಮುಂದೆ ಬರುವ ಹಬ್ಬಗಳಿಗೆ ವಿಶೇಷ ರೈಲು ಸೇವೆ ಒದಗಿಸಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸನ್ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನೈರುತ್ಯ ರೈಲ್ವೆ ವಲಯ ಇದೀಜ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಿದೆ. ಸನ್ಮಾನ್ಯ ಸಂಸದರು ಹಾಗು ಅವರ ತಂಡದ ವಿಶೇಷ ಪ್ರಯತ್ನ ಹಾಗು ಜಿಲ್ಲೆಯ ರೈಲು ಪ್ರಯಾಣಿಕರು,ಹಿತರಕ್ಷಣ ಸಮಿತಿಗಳ ಬೇಡಿಕೆಯ ಫಲವಾಗಿ ನೈರುತ್ಯ ರೈಲ್ವೆ ವಲಯ ವಿಶೇಷ ರೈಲು ಸೇವೆ ಒದಗಿಸಿದೆ.
ಈ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ವಲಯಕ್ಕೆ ಮನವಿ ಮಾಡಿದ ಸನ್ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗು ಅವರ ತಂಡಕ್ಕೆ ಹಾಗು ರೈಲು ಓಡಿಸಲು ಕ್ರಮ ಕೈಗೊಂಡ ನೈರುತ್ಯ ರೈಲ್ವೆ ವಲಯಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರಿಗೆ ಬಂದು ಹಿಂದಿರುಗುವ ಯೋಜನೆ ರೂಪಿಸುತ್ತಿರುವವರು ಈ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.