ತುಳು ಭಾಷೆ, ಲಿಪಿ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು ಹಾಗೂ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಜೈ ತುಲುನಾಡ್ (ರಿ.) ಸಂಸ್ಥೆಯ ಬಂಟ್ವಾಳ ಘಟಕದ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಅಧ್ಯಕ್ಷ ಉದಯ್ ಪೂಂಜ ತಾರಿಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳದಲ್ಲಿ ತುಳು ಪರ ಕೆಲಸಗಳನ್ನು ಮಾಡುವುದು ನಮ್ಮ ಪ್ರಮುಖ ಉದ್ದೇಶ ಎಂದರು.
ಬಂಟ್ವಾಳ ಘಟಕದ ನಿಯೋಜಿತ ಅಧ್ಯಕ್ಷರಾದ ಕಿಶೋರ್ ಪೂಜಾರಿ ಅಧಿಕಾರ ಸ್ವೀಕರಿಸಿ “ತುಳು ಭಾಷೆ, ಲಿಪಿ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಬಂಟ್ವಾಳದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮುಂದಾಳತ್ವ ವಹಿಸುವೆವು” ಎಂದರು.
ಮುಖ್ಯ ಅತಿಥಿಗಳಾಗಿ ಕುಲಶೇಖರ ಮೆಸ್ಕಾಂ ಸಹಾಯಕ ಇಂಜಿನಿಯರ್ ಮತ್ತು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ ,ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ಅಧ್ಯಕ್ಷ ಕೆ ಸತೀಶ್ ಅರಳ, ಸಿನಿಮಾ ನಟ ಹಾಗೂ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ವಿಟ್ಲ ವಿಠಲ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಮಾಧವ ವಿ.ಎಸ್. ಕಡೇಶಿವಾಲಯ, ಸಿನಿಮಾ ಹಾಗೂ ಕಿರುತೆರೆ ನಟಿ ಐಶ್ವರ್ಯ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನ ಬಂಟ್ವಾಳ ಘಟಕದ ಕಾರ್ಯಕಾರಿ ಸಮಿತಿ ಪ್ರಕಟಿಸಲಾಯಿತು: ನೂತನ ಘಟಕದ ಹೊಸ ಅಧ್ಯಕ್ಷರಾಗಿ ಕಿಶೋರ್ ಪೂಜಾರಿ, ಉಪಾಧ್ಯಕ್ಷರಾಗಿ ಪ್ರತೀಕ್ ತುಲುವೆ, ಕಾರ್ಯದರ್ಶಿ ಶ್ವೇತಾ ಡಿ. ಬಡಗಬೆಳ್ಳೂರು, ಜೊತೆ ಕಾರ್ಯದರ್ಶಿ ರಂಜಿತಾ ಬಿ. ಶೆಟ್ಟಿ, ಕೋಶಾಧಿಕಾರಿ ರೋಹಿತಾಕ್ಷಿ ತುಲುವೆದಿ ಅನಂತಾಡಿ, ಸಹ ಕೋಶಾಧಿಕಾರಿ ರಕ್ಷಾ ಕೆ., ಸಂಘಟನಾ ಕಾರ್ಯದರ್ಶಿ ರೇಣುಕಾ ಕಣಿಯೂರು, ವಿನ್ಯಾಸ್, ಸಹ ಸಂಘಟನಾ ಕಾರ್ಯದರ್ಶಿ ತ್ರಿಶಾಲಿ, ಕಾರ್ಯಕಾರಿ ಸದಸ್ಯರಾಗಿ ದಿವ್ಯ, ಸುಶ್ಮಿತಾ, ಮಂಜುನಾಥ್, ಸವಿತಾ, ಬಂಟ್ವಾಳ ವಲಯ ಲೇಲೇಲೇಗ – ಸಾಂಸ್ಕೃತಿಕ ಕೂಟದ ಮೇಲ್ವಿಚಾರಕರಾಗಿ ಜನಾರ್ಧನ್ ಪೆರ್ನೆ, ಸಹ ಮೇಲ್ವಿಚಾರಕರಾಗಿ ಪ್ರಸ್ತುತಿ ಆಯ್ಕೆಯಾದರು.
ರೋಹಿತಾಕ್ಷಿ ತುಲುವೆದಿ ಅನಂತಾಡಿ ಸ್ವಾಗತಿಸಿದರು, ಪ್ರಕೃತಿ ಪ್ರಾರ್ಥಿಸಿದರು, ಕೇಂದ್ರ ಸಮಿತಿ ಯ ಕೋಶಾಧಿಕಾರಿ ರಾಜಶ್ರೀ ಚಂದ್ರಶೇಖರ ಧನ್ಯವಾದ ಅರ್ಪಿಸಿದರು, ಕೇಂದ್ರ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಜನಾರ್ಧನ್ ಪೆರ್ನೆ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸದಸ್ಯರು ರಾಣಿ ಅಬ್ಬಕ್ಕ ತುಳು ಅಧ್ಯಯನ ಸಂಶೋಧನಾ ಕೇಂದ್ರ, ಬಂಟ್ವಾಳಕ್ಕೆ ಭೇಟಿ ನೀಡಿ, ಡಾ. ತುಕಾರಾಂ ಪೂಜಾರಿ ಅವರಿಂದ ರಾಣಿ ಅಬ್ಬಕ್ಕ ಹಾಗೂ ತುಳು ಬದುಕಿನ ಬಗ್ಗೆ ಮಾಹಿತಿ ಪಡೆದರು.
OPTIC WORLD