ಬಂಟ್ವಾಳ: ಶ್ರೀ ಧರ್ಮಸ್ಥಳ ಧರ್ಮರಕ್ಷಣಾ ವೇದಿಕೆಯಿಂದ ಬಂಟ್ವಾಳದಲ್ಲಿ ಬುಧವಾರ ಜನಾಗ್ರಹ ಸಭೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಬಳಿಕ ತಹಸೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸಲ್ಲಿಕೆಯ ಮೊದಲು ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಮಾತನಾಡಿದ ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ ಭಟ್ಟ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಅಸ್ಮಿತೆಯನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಹಲವಾರು ಜನಪರ ಕಾರ್ಯಗಳನ್ನು ನಡೆಸಿರುವ ಧರ್ಮಸ್ಥಳವನ್ನು ಹಾಗೂ ಧರ್ಮಾಧಿಕಾರಿಗಳನ್ನು ಅವಹೇಳನ ಮಾಡಲಾಗುತ್ತಿದ್ದು, ಸುಳ್ಳಿನ ಮುಸುಕು ತೆಗೆಯಬೇಕು ಎಂಬುದು ಜನಾಗ್ರಹವಾಗಿದೆ ಎಂದರು.
ಬೆಳಗ್ಗೆ ಸ್ಪರ್ಶ ಕಲಾ ಮಂದಿರದಲ್ಲಿ ಸಭೆ ಸೇರಿದ ಸಾರ್ವಜನಿಕರು, ಭಕ್ತಾಭಿಮಾನಿಗಳು ಶಿವಪಂಚಾಕ್ಷರಿ ಮಂತ್ರವನ್ನು 108 ಬಾರಿ ಪಠಿಸಿದರು. ಬಳಿಕ ಜನಾಗ್ರಹ ಸಭೆಯನ್ನುದ್ದೇಶಿಸಿ ಮುಖಂಡರು ಮಾತನಾಡಿದರು. ಧರ್ಮಸ್ಥಳ ಕ್ಷೇತ್ರ ಕುರಿತು ವ್ಯವಸ್ಥಿತವಾದ ಅಪಪ್ರಚಾರ, ಧರ್ಮಾಧಿಕಾರಿಗಳ ತೇಜೋವಧೆಯಂಥ ಘಟನೆಗಳು ನಾನಾ ರೀತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರಾದ ನಮಗೆ ಘಾಸಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಟ್ಟು ಸೇರಿದ್ದೇವೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಈ ಸಂದರ್ಭ ಹೇಳಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ ಹಿಂದು ಸಮಾಜದ ಒಗ್ಗಟ್ಟನ್ನು ಮುರಿಯಲು ಈ ಕೃತ್ಯ ನಡೆದಿದೆ ಎಂದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ನ್ಯಾಯ ದೊರಕಬೇಕು ಎಂದಾದರೆ ಎನ್.ಐ.ಎ. ತನಿಖೆಯಾಗಬೇಕು ಆ ಸಂದರ್ಭ ಸತ್ಯ ಹೊರಗೆ ಬರುತ್ತದೆ ಎಂದರು. ಪ್ರಮುಖರಾದ ಎನ್.ಪ್ರಕಾಶ್ ಕಾರಂತ, ರಾಮದಾಸ ಬಂಟ್ವಾಳ, ಸುದರ್ಶನ ಜೈನ್, ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿದರು.
ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ, ವಿವಿಧ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಕೃಷ್ಣಕುಮಾರ್ ಪೂಂಜ, ಮಾಣಿಕ್ಯರಾಜ್ ಜೈನ್, ದಿನೇಶ್ ಅಮ್ಟೂರು, ರಾಮದಾಸ ಬಂಟ್ವಾಳ, ರೊನಾಲ್ಡ್ ಡಿಸೋಜ, ಜಗನ್ನಾಥ ಸಾಲಿಯಾನ್, ಚಂದ್ರಹಾಸ ಶೆಟ್ಟಿ ರಂಗೋಲಿ, ಕಿರಣ್ ಹೆಗ್ಡೆ, ಕೃಷ್ಣಯ್ಯ ಬಲ್ಲಾಳ್, ಪದ್ಮಶೇಖರ ಜೈನ್, ಪ್ರಭಾಕರ ಪ್ರಭು, ಚಂದ್ರಹಾಸ ಶೆಟ್ಟಿ ಬೋಳಿಯಾರ್, ಕರುಣೇಂದ್ರ ಪೂಜಾರಿ, ತುಂಗಪ್ಪ ಬಂಗೇರ, ಹರೀಂದ್ರ ಪೈ, ವಸಂತ ಮಣಿಹಳ್ಳ, ಸುಭಾಶ್ಚಂದ್ರ ಜೈನ್, ರಾಜೇಂದ್ರ ಜೈನ್ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಸದಾನಂದ ನಾವರ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.
OPTIC WORLD