ಪ್ರಯಾಣಿಕರೇ ದಯವಿಟ್ಟು ಗಮನಿಸಿ!
ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟ್ ಭಾಗದ ಕಡಗರವಳ್ಳಿ-ದೋಣಿಗಲ್, ಎಡಕುಮೇರಿ–ಕಡಗರವಳ್ಳಿ ಮತ್ತು ಶಿರಿಬಾಗಿಲು–ಎಡಕುಮೇರಿ ಭಾಗಗಳಲ್ಲಿ ನಿನ್ನೆ ಗುಡ್ಡ ಕುಸಿತ ಸಂಭವಿಸಿದ ಬಳಿಕ ಮಣ್ಣು ತೆರವು ಕಾರ್ಯಚರಣೆ ಆರಂಭಗೊಂಡು ಇಂದು ಸಮಾಪ್ತಿಗೊಂಡಿದೆ ಹಾಗು ರೈಲುಗಳ ಸಂಚಾರಕ್ಕೆ ಯೋಗ್ಯವೆಂದು ಘೋಷಿಸಲಾಗಿದೆ.
⏰ ವಿವಿರ ಈ ರೀತಿಯಿದೆ:
1.ಕಡಗರವಳ್ಳಿ–ದೋಣಿಗಲ್ ಭಾಗದಲ್ಲಿ 17.08.2025ರಂದು ಬೆಳಿಗ್ಗೆ 05:10ಕ್ಕೆ ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.
2.ಎಡಕುಮೇರಿ–ಕಡಗರವಳ್ಳಿ ನಡುವೆ 17.08.2025ರಂದು ಬೆಳಿಗ್ಗೆ 06:30ಕ್ಕೆ ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.
3.ಶಿರಿಬಾಗಿಲು–ಎಡಕುಮೇರಿ ನಡುವೆ 16.08.2025ರಂದು ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.
✅ ಇದರೊಂದಿಗೆ ಪ್ರಯಾಣಿಕರ ರೈಲು ಸಂಚಾರ ಪುನರಾರಂಭಗೊಂಡಿದ್ದು, ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಖಾತ್ರಿಪಡಿಸಲಾಗಿದೆ.
📢 ರೈಲು ಸಂಚಾರ ಮಾಹಿತಿ:
🚆 ರೈಲು ಸಂಖ್ಯೆ 16585 — ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಸಕಲೇಶಪುರದಿಂದ ಹೊರಟಿದ್ದು, ಮಧ್ಯಾಹ್ನ 12:00 ಗಂಟೆಗೆ ಎಡಕುಮೇರಿ ರೈಲು ನಿಲ್ದಾಣವನ್ನು ದಾಟಿದೆ.
ಉಳಿದ ರೈಲುಗಳು ನಿನ್ನೆಯ ಪ್ರಕಟಣೆಯಂತೆ ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದೆ.
ಇಂದು ಎಲ್ಲಾ ರೈಲುಗಳು ಎಂದಿನ ಮಾರ್ಗದಲ್ಲಿ ವಿಳಂಬವಾಗಿ ಓಡುವ ಸಾಧ್ಯತೆಯಿದೆ.
📲 ನಿಮ್ಮ ರೈಲು ಎಲ್ಲಿದೆ,ರೈಲಿನ ಸ್ಥಿತಿಯನ್ನು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ,ಅಪ್ಲಿಕೇಶನ್ “ಎನ್.ಟಿ.ಇ.ಎಸ್” ಅಥವ “ವೇರ್ ಇಸ್ ಮೈ ಟ್ರೈನ್” ಅಂತಹ ಖಾಸಗಿ ಅಪ್ಲಿಕೇಶನ್ ಬಳಸಿ.
📞 ತುರ್ತು ಸಹಾಯಕ್ಕಾಗಿ ದಯವಿಟ್ಟು 139ಗೆ ಕರೆಮಾಡಿ ಅಥವಾ @RailwaySeva ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ.
-ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ
OPTIC WORLD