ಪ್ರಯಾಣಿಕರೇ ದಯವಿಟ್ಟು ಗಮನಿಸಿ!
ಭಾರೀ ಮಳೆಯಿಂದಾಗಿ 16.08.2025ರಂದು ಸಂಜೆ ಸುಮಾರು 4:40ಕ್ಕೆ ಶಿರಿಬಾಗಿಲು–ಎಡಕುಮೇರಿ, ಎಡಕುಮೇರಿ–ಕಡಗರವಳ್ಳಿ ಮತ್ತು ಕಡಗರವಳ್ಳಿ–ದೋಣಿಗಲ್ ನಡುವಿನ ಭಾಗಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ ಕಾರಣ ಸುಬ್ರಹ್ಮಣ್ಯ ರೋಡ್–ಸಕಲೇಶಪುರ ಘಾಟ್ ಭಾಗದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿದೆ.
OPTIC WORLD
⛔ ನೈರುತ್ಯ ರೈಲ್ವೆ ವಲಯವು16.08.2025ರಂದು ರಾತ್ರಿ 08:00ಕ್ಕೆ ನೀಡಿದ ಪ್ರಕಟನೆಯ ಪ್ರಕಾರ ರೈಲು ಸೇವೆಗಳಲ್ಲಿ ಬದಲಾವಣೆಗಳು ಹೀಗಿದೆ:
1.ರೈಲು ಸಂಖ್ಯೆ 07378- ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು
16.08.2025ರಂದು ತೋಕೂರು, ಕಾರವಾರ, ಮಡಗಾಂವ್, ಲೋಂಡಾ,ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ.
ಈ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
2.ರೈಲು ಸಂಖ್ಯೆ 16586- ಮುರುಡೇಶ್ವರ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ 16.08.2025ರಂದು ಕಾಸರಗೋಡು, ಶೋರನೂರು, ಪಾಲಕ್ಕಾಡ್, ಸೇಲಂ, ಜೋಲಾರಪೇಟಿ ಮಾರ್ಗವಾಗಿ ಚಲಿಸಲಿದೆ.
ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಹೊಳೆನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಕ್ರಾ.ಸಂ.ರಾ ಬೆಂಗಳೂರು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
3.ರೈಲು ಸಂಖ್ಯೆ 16512- ಕಣ್ಣೂರು–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್
16.08.2025ರಂದು ಕಾಸರಗೋಡು, ಶೋರನೂರು,ಪಾಲಕ್ಕಾಡ್, ಸೇಲಂ, ಜೋಲಾರಪೇಟೆ ಮಾರ್ಗವಾಗಿ ಚಲಾಯಿಸಲಾಗುತ್ತದೆ.
ಈ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಬಿ.ಜಿ. ನಗರ, ಕುಣಿಗಲ್, ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
4.ರೈಲು ಸಂಖ್ಯೆ 16596- ಕಾರವಾರ–ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್
16.08.2025ರಂದು ಮಂಗಳೂರು ಜಂಕ್ಷನ್, ಕಾಸರಗೋಡು, ಶೋರನೂರು, ಪಾಲಕ್ಕಾಡ್, ಸೇಲಂ, ಜೋಲಾರಪೇಟೆ ಮಾರ್ಗವಾಗಿ ಸಂಚರಿಸಲಿದೆ.
ಈ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್,ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
🛠️ ದುರಸ್ತಿ ಕಾರ್ಯದ ನಿಮಿತ್ತ ಸಾಮಾಗ್ರಿಗಳನ್ನು ಹೊತ್ತ ರೈಲು ಸಂಜೆ 5:58ಕ್ಕೆ ಸಕಲೇಶಪುರದಿಂದ ತೆರಳಿ ಗುಡ್ಡ ಕುಸಿತವಾದ ಸ್ಥಳಕ್ಕೆ ತಲುಪಿದೆ ಹಾಗು ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದೆ. ಮೈಸೂರು ವಿಭಾಗದ ವಿಭಾಗೀಯ ಪ್ರಬಂಧಕರಾದ ಶ್ರೀ ಮುಕುಲ್ ಶರಣ್ ಮಾಥೂರ್, ಉಪ ಪ್ರಧಾನ ವ್ಯವಸ್ಥಾಪಕ ಶ್ರೀ ಕೆ.ಎಸ್. ಜೈನ್ ಹಾಗೂ ಪಿಎಚ್ಒಡಿಗಳ ತಂಡ ಸ್ಥಳದಲ್ಲೇ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
📲 ನಿಮ್ಮ ರೈಲು ಎಲ್ಲಿದೆ,ರೈಲಿನ ಸ್ಥಿತಿಯನ್ನು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ,ಅಪ್ಲಿಕೇಶನ್ “ಎನ್.ಟಿ.ಇ.ಎಸ್” ಅಥವ “ವೇರ್ ಇಸ್ ಮೈ ಟ್ರೈನ್” ಅಂತಹ ಖಾಸಗಿ ಅಪ್ಲಿಕೇಶನ್ ಬಳಸಿ.
📞 ತುರ್ತು ಸಹಾಯಕ್ಕಾಗಿ ದಯವಿಟ್ಟು 139ಗೆ ಕರೆಮಾಡಿ ಅಥವಾ @RailwaySevaಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ.
Information Source: ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ