ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಅದಕ್ಕಾಗಿ ಅನೇಕ ಹಿರಿಯರು ತಮ್ಮ ಸ್ವಾರ್ಥ ಮರೆತು ಬ್ರಿಟಿಷ್ ಪಾರುಪತ್ಯದ ವಿರುದ್ದ ಹೋರಾಡಿದ್ದಾರೆ.ಇವತ್ತಿನ ನಮ್ಮ ಸ್ವಾತಂತ್ರ್ಯವನ್ನು ಯಾವ ಕಾಲಕ್ಕೂ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ.ಯಾವುದೇ ಸಂದರ್ಭದಲ್ಲಿ ಏನೇ ಆದರೂ ದೇಶ ಮೊದಲು ಎಂಬ ಪ್ರಾಮಾಣಿಕ ಭಾವದಿಂದ ನಮ್ಮ ದೇಶವನ್ನು ರಕ್ಷಿಸೋಣ ಎಂಬುದಾಗಿ ವಿಶ್ರಾಂತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಸಂಚಯಗಿರಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕವಾದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು “ಕನ್ನಡ ಭವನ” ದ ಆವರಣದಲ್ಲಿ ಏರ್ಪಡಿಸಿದ್ದ ೭೯ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ವಹಿಸಿ ಸಂದೇಶವನ್ನು ನೀಡಿದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಧ್ವಜಾರೋಹಣ ಗೈದರು.
ಕಸಾಪ ಬಂಟ್ವಾಳ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ, ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ ನಾಯಕ್ ಕೆ , ಲತೀಫ್ ಮೊದಲಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ವಿ.ಸು.ಭ.ಬಂಟ್ವಾಳ ಸ್ವಾಗತಿಸಿದರು. ಪಾಣೆಮಂಗಳೂರು ಹೋಬಳಿ ಘಟಕದ ಅಧ್ಯಕ್ಷ ಮೊಹಮ್ಮದ್ ವಂದಿಸಿದರು.
PAGE 1
PAGE 2