ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಕಾರ್ಯಕ್ರಮ ಆಗಸ್ಟ್ 28ರಂದು ಗುರುವಾರ ಏರ್ಯಬೀಡಿನಲ್ಲಿ ಅಪರಾಹ್ನ 4 ಗಂಟೆಗೆ ನಡೆಯಲಿದೆ ಎಂದು ಏರ್ಯ ಆಳ್ವ ಫೌಂಡೇಶನ್ ಪ್ರಕಟಣೆ ತಿಳಿಸಿದೆ.
OPTIC WORLD
ಆನಂದಿ ಎಲ್. ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ನಾ.ದಾಮೋದರ ಶೆಟ್ಟಿ ಸಂಪಾದಿತ ಏರ್ಯ ಸಾಹಿತ್ಯ ಮರುಚಿಂತನ ಕೃತಿಯ ಅನಾವರಣ ಪ್ರೊ.ಬಿ.ಎ.ವಿವೇಕ್ ರೈ ಅವರಿಂದ ಬಿಡುಗಡೆಯಾಗಲಿದೆ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿಯನ್ನು ಡಾ. ಕೆ.ಚಿನ್ನಪ್ಪ ಗೌಡ ಮತ್ತು ಡಾ. ನಾ.ದಾಮೋದರ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುವುದು. ಏರ್ಯ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಡಾ. ಹಂಪ ನಾಗರಾಜಯ್ಯ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.