ಇಂದಿನ ವಿಶೇಷ

ನಂಬಿಕೆಯ ನೂಲಿನೊಳಗೆ ಬಾಂಧವ್ಯ ಬೆಸೆಯುವ ಬಂಧನ – ಸುರೇಶ್ ಎಸ್. ನಾವೂರು ಲೇಖನ

ಜಾಹೀರಾತು

 

📝ಸುರೇಶ್ ಎಸ್.ನಾವೂರು.

ಆತನ ಕೈಗೆ ರಕ್ಷೆ ಕಟ್ಟಿ ಕಾಲು ಹಿಡಿದು ಆಶೀರ್ವದಾ ಪಡೆಯಬೇಕೆಂದು ಅಣ್ಣ ಬರುವ ದಾರಿಯ‌ ಕಡೆ ದೃಷ್ಟಿ ಇಟ್ಟು ಆತನ ಬರುವಿಕೆಗೆ ಕಾಯುತ್ತಿರುವ ತಂಗಿಯಂದಿರು ತಮ್ಮಂದಿರು, ಅಕ್ಕನ ಕೈಗೆ ರಕ್ಷೆ ಕಟ್ಟಿ ಕಾಲು ಹಿಡಿದು ಆರ್ಶಿವಾದ ಬೇಡಬೇಕೆಂಬ ಮನದಾಸೆ ಹೊತ್ತಿರುವ ತಮ್ಮ,‌ತಮ್ಮನ‌ ಕೈಗೆ ರಾಕಿ ಕಟ್ಟಿ ಆತ ನನ್ನ ಬಾಯಿಗೆ ಸಿಹಿ ತಿನ್ನಿಸುತ್ತಾನೆಂದು ಎಂದು ಕಾಯುವ ಅಕ್ಕ, ಹೀಗೆ ಕುಟುಂಬ ,ಮನೆಯೊಳಗೆ ಬೆಸೆಯುವ ಬಾಂಧವ್ಯ ಒಂದು ಕಡೆಯಾದರೆ,ಮನಸ್ಸಿನಲ್ಲಿ ಸೋದರತೆಯ ಭಾವ ಮೂಡಿ ತನ್ನ ಮನೆಯವರಲ್ಲ‌‌ ಕುಟುಂಬದವರಲ್ಲದಿದ್ದರೂ ತನ್ನ ಮನೆಯ ಒಬ್ಬ ಸದಸ್ಯ ಎಂಬ ಭಾವದಿ ಹೃದಯ ತುಂಬಿ ಬಂದು ಬಾಯಿ ತುಂಬಾ ಅಕ್ಕ ಅಣ್ಣ ತಂಗಿ ತಮ್ಮ ಎಂದು‌ ಕರೆಯುವ ಸೋದರತೆಯ ಪ್ರೀತಿಯ ತೋರಿಸುವ ಜೀವಿಗಳು ಒಂದು ಕಡೆ.

ಈ‌ ಪವಿತ್ರ” ಸಹೋದರ ಸಹೋದರತೆಯ ಭಾವ ಬಂಧವನ್ನು ಸಂಬಂಧವನ್ನು ಒಂದು ನೂಲು ಬೆಸೆದು ಕೊಂಡಿದೆ ಅದು ರಕ್ಷಾಬಂಧನ.
ಅ ನೂಲಿನಲ್ಲಿದೆ ತಾಯಿಯ‌ ಅಪ್ಪುಗೆಯ ಪ್ರೀತಿ ,ತಂದೆಯ ಕಾಳಜಿಯ ಪ್ರೀತಿ ,ಅಣ್ಣನ ಮುನಿಸಿನ ಪ್ರೀತಿ, ಅಕ್ಕನ ಸಾಂತ್ವನ ದ ಪ್ರೀತಿಯ‌ ಜೊತೆಗೆ ರಾಷ್ಟ್ರವನ್ನು ಕಟ್ಟುವ ರಾಷ್ಟ್ರ ಜಾಗೃತಿಯ ಮನಸ್ಸುಗಳನ್ನು‌ ಒಟ್ಟು ಮಾಡುವ ಪುಣ್ಯದ ಕಾರ್ಯವನ್ನು ಒಂದು‌ ನೂಲು‌ ಬೆಸೆದು ಕೊಂಡಿದೆ‌.
ಭಾರತ ಇಡೀ ವಿಶ್ವದವರನ್ನು ಸೋದರ ಸೋದರಿಯರು ಎಂಬ ಭಾಂದವ್ಯದಿ ನೋಡಿದ ನೋಡುತ್ತಿರುವ ರಾಷ್ಟ. ಅಂದ ಹಾಗೆ ಈ ಪುಣ್ಯ ಭೂಮಿಯಲ್ಲಿ ಸೋದರತೆಯ ಭಾವವನ್ನು ಭಾಂದವ್ಯವನ್ನು ಒಂದು ನೂಲು ಬೆಸೆದು‌ ಕೊಂಡಿದೆ ಎಂದರೆ ಇದು ಪುಣ್ಯಭೂಮಿಯ ಮೂಲ ನಂಬಿಕೆಗಳು ಸಂಸ್ಕಾರ ಸಂಸ್ಕೃತಿಗಳ ಶ್ರೀಮಂತಿಕೆ.

ಆದರೆ ನೋವಿನ ವಿಚಾರ ಅಂದರೆ ನಮ್ಮ ದೇಶದ ವಿಶಿಷ್ಟ ಹಬ್ಬ ಜಗತ್ತಿಗೆ ನೀಡಿದ ಸಂದೇಶದ ನಂಬಿಕೆ ಸಂಸ್ಕಾರ ಸಂಸ್ಕ್ರತಿಗಳನ್ನು ಮನಃಪೂರ್ವಕವಾಗಿ ಸ್ವೀಕಾರ ಹಾಗೂ ನೈಜವಾದ ಪಾಲನೆಯ ಕೊರತೆ,ಪಾಲನೆಯ ಜೊತೆಗೆ ಹಂಚಿಕೆ, ಇದು ಇಂದಿನ ರಕ್ಷಾಬಂಧನ ಎಂಬ ಹಬ್ಬವನ್ನು ಸಂಬಂಧಗಳ ನೆಲೆಗಟ್ಟಿನಲ್ಲಿ ಮನಃ ಪೂರ್ವಕವಾಗಿ ಸ್ವೀಕರಿಸಿದಂತೆ ಅದರೊಳಗೆ ನೈಜ ಸತ್ವವನ್ನು ನಮ್ಮ ಬದುಕಿನೊಳಗೆ ಪರಿಪೂರ್ಣವಾಗಿ ಅಳವಡಿಸಿಕೊಂಡಂತೆ ಇಂದು ಕೂಡ ತನ್ನ ಬಲಾಢ್ಯ ಬಾಹುಗಳಿಂದ ಬಂಧನವಾಗಿರುವ ಪಿಡುಗುಗಳಾದ ಅಸ್ಪೃಶ್ಯತೆ,ಜಾತಿ ತಾರತಮ್ಯಗಳ ಕಪಿಮುಷ್ಠಿಯಿಂದ ಹೊರಬರಲು ನಮ್ಮನ್ನು ನಾವು ಅರಿತು ನಡೆದುಕೊಳ್ಳಲು ಸಹೋದರ ಸಹೋದರಿಯರೆಂಬ ಭಾವಗಳು ಬೆಸೆದುಕೊಳ್ಳಲು ಒಂದು ಧನಾತ್ಮಕ ಚಿಂತನೆಯ ಪಂಚಾಂಗವನ್ನು ಹಾಕಿಕೊಡಬಹುದು.ಜೊತೆಗೆ ಇಂದಿನ ವಿದ್ಯಾಮಾನದಲ್ಲಿ ಕಂಡು ಬರುವ ವಿವಿಧ ರೀತಿಯ
ಶೋಷಣೆಗಳು, ಅತ್ಯಾಚಾರಗಳು, ಕೀಳು ಮನಸ್ಥಿತಿಯ ಕೌರ್ಯ, ಮನುಷ್ಯತ್ವವೇ ಇಲ್ಲದೇ ನಡೆಯುವ ಘಟನೆಗಳಿಗೆ,ಇಳಿಯುವ ಮೊದಲು ಸ್ವಯಂ ಅತ್ಮ ವಿಮರ್ಶೆಗೆ ದಾರಿ ಮಾಡಿಕೊಡುವಂತೆ ಸಂಬಂಧ ನೆಲೆಯಲ್ಲಿ “ಅವರು ನಮ್ಮವರು ನಾವು ನಮ್ಮವರು “ಎಂಬ ಸಂದೇಶಗಳು ನಮ್ಮೊಳಗೆ ಜಾಗೃತಿಗೊಳ್ಳಲು ಪ್ರೇರಣೆಯಾಗಬಹುದು.
ಮಾನವೀಯ ಮೌಲ್ಯಗಳು ಹಾಗೂ ಮಾನವೀಯತೆಯ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳಲು ಹಾಗೂ ವಿಶಾಲವಾದ ದೃಷ್ಟಿಕೋನಗಳಲ್ಲಿ ಸಮಾಜವನ್ನು ನೋಡಲು ಸಹಕಾರಿಯಾಗಬಹುದು.
ರಕ್ತ ಸಂಬಂಧಿಗಳ ಜೊತೆಗೆ ರಕ್ತ ಸಂಬಂಧಿ ಅಲ್ಲದೇ ಇದ್ದರೂ, ಸೋದರತೆಯ ಭಾವ ಬೆಸೆದು ಅಣ್ಣನ ಪ್ರೀತಿ,ಅಕ್ಕನ‌‌ ಪ್ರೀತಿ ತಮ್ಮನ ಪ್ರೀತಿ ನೀಡಿ ಸೋದರತೆಯ ಭಾವದಿ ತಬ್ಬಿಕೊಂಡು ಸೋದರತೆಯ ಪ್ರೀತಿಯ ಸಿಂಚನಗೈಯುವ ರಕ್ಷಾಬಂಧನ ಸರ್ವರಿಗೂ ಹಬ್ಬದ ಶುಭಾಶಯಗಳು

  • ಸುರೇಶ್ ಎಸ್ ನಾವೂರು, ನಾಟಕ ರಚನೆಕಾರರು, ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಸಮುದಾಯ ಕಾರ್ಯನಿರ್ವಾಹಕರು .
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.