ಮಾದಕ ವಸ್ತು ಮಾರಾಟ ಮಾಡುವವರ ಬೇಟೆಯನ್ನು ಮಂಗಳೂರು ನಗರ ಪೊಲೀಸರು ಮುಂದುವರಿಸಿದ್ದು, ಗುರುವಾರ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆ ಉದ್ಯಾವರ ಗ್ರಾಮದ ದೇವರಾಜ್ ಪೂಜಾರಿ @ ದೇವು (38) ಉಡುಪಿ ಜಿಲ್ಲೆಯ ಕಾಪು ತಾಲೂಕು ಪಲಿಮಾರು ಗ್ರಾಮದ ಜೀವನ್ ಅಮೀನ್ (32) ಮಂಗಳೂರು ಮೂಡುಶೆಡ್ಡೆಯ ಇಮ್ರಾನ್ (40), ಮಂಗಳೂರು ಅಶೋಕನಗರದ ಬಿ.ಮೊಹಮ್ಮದ್ ಹನೀಫ್ (56) ಬಂಧಿತ ಆರೋಪಿಗಳು ಇವರ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 44/2025 ರಲ್ಲಿ ಎನ್ .ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.
ಸೆನ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯ ಮೇರೆಗೆ ಮಂಗಳೂರಿನ ನಗರದ ಬಂಗ್ರಕುಳೂರು ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿರುವ ವೇಳೆಗೆ ದಾಳಿ ಮಾಡಿದ ಪೊಲೀಸರು ಆರೋಪಿತರಿಂದ 51 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಎಂ ಡಿ ಎಂ ಎ ಯನ್ನು ವಶಪಡಿಸಿಕೊಂಡರು. ಜತೆಗೆ ಆರೋಪಿತರು ಕೃತ್ಯಕ್ಕೆ ಬಳಸಿದ 7 ಮೊಬೈಲ್ ಫೋನ್ ಗಳು, ಮಾರುತಿ ಬೆಲೆನೂ, ಮಹೀಂದ್ರಾ ಸ್ಕಾರ್ಪಿಯೋ ಕಾರು, ನಗದು ಹಣ 11,990 ರೂ ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ 1 ಗ್ರಾಂ ಎಂ ಡಿ ಎಂ ಎ ಗೆ ಅಂದಾಜು ಮೌಲ್ಯ 2,500 ರೂಗಳಗಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರಾಜ್ ಪೂಜಾರಿ @ ದೇವು ಎಂಬಾತನು ಉಡುಪಿ, ಶಿವಮೊಗ್ಗ, ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಎಂ ಡಿ ಎಂ ಎ ಯನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾನೆ ಹಾಗೂ ಉಳಿದ 03 ಜನ ಆರೋಪಿತರು ಮಂಗಳೂರು ನಗರದಲ್ಲಿ ಎಂ ಡಿ ಎಂ ಎ ಯನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ.
ಎಂ ಡಿ ಎಂ ಎ ಯನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಗಳ್ಲಲಿ ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ಕಂಡುಬಂದಿದ್ದು, ತನಿಖೆ ಮುಂದುವರೆದಿದೆ.ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿರುತ್ತಾರೆ.