OPTIC WORLD
ದೀನ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ದ. ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಂಟ್ವಾಳ ಕೃಷಿ ಇಲಾಖೆ ಗ್ರಾಮ ಪಂಚಾಯತ್ ಗೋಳ್ತಾಮಜಲು, ಆಶೀರ್ವಾದ ಸಂಜೀವಿನಿ ಒಕ್ಕೂಟ ಗೋಳ್ತಮಜಲು ಸಹಯೋಗದಲ್ಲಿ ಹಡಿಲು ಬಿದ್ದ ಗದ್ದೆಯ ನೇಜಿ ನಾಟಿ ಕಾರ್ಯಕ್ರಮ ಗೋಳ್ತಮಜಲು ಗ್ರಾಮದ ಬಲ್ಕಟ್ಟ ಕೊಗ್ಗು ಪೂಜಾರಿ ಅವರ ಮನೆಯಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಹಾಗೂ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಕುಮುದ ತೆ0ಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕೃಷಿ ಅಧಿಕಾರಿ ನಂದನ್ ಶೆಣೈ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ್ ಆಳ್ವ, ಎನ್,ಆರ್.ಎಲ್.ಎಂ. ಅಭಿಯಾನದ ತಾಲೂಕು ವ್ಯವಸ್ಥಾಪಕರಾದ ಸುಧಾ, ಗದ್ದೆಯ ಮಾಲಕ ಕೊಗ್ಗು ಪೂಜಾರಿ, ಕರುಣಾಕರ ಬಲ್ಕಟ್ಟ ಉಪಸ್ಥಿತರಿದ್ದರುಗಾಯತ್ರಿ ಅಳಿಕೆ ಪ್ರಾರ್ಥಿಸಿದರು. ತಾಲೂಕು ಮೇಲ್ವಿಚಾರಕರಾದ ಕುಸುಮ ಸ್ವಾಗತಿಸಿದರು. ಭವಾನಿ ವಂದಿಸಿದರು. ಪುಷ್ಪವತಿ. ಪಿ ಕಾರ್ಯಕ್ರಮ ನಿರೂಪಿಸಿದರು