OPTIC WORLD
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನಸಭಾ ಕ್ಷೇತ್ರ 2025-27ರ ಸಾಲಿನ ಅಧ್ಯಕ್ಷರಾಗಿ ಸುಮೀತ್ ಕುಲಾಲ್ ಸೊರ್ನಾಡ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಪಧಾದಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಎಚ್ಕೆ ನಯನಾಡು. ಕಾರ್ಯದರ್ಶಿ ಜಯಗಣೇಶ್ ಬಂಗೇರ ದಾಸಕೋಡಿ. ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು. ಮಹಿಳಾ ಸಂಚಾಲಕಿಯಾಗಿ ದುರ್ಗಾಶ್ರಿ ಪ್ರದೀಪ್ ಭಂಡಾರಿಬೆಟ್ಟು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿಶೋರ್ ಬಸ್ತಿಪಡ್ಪು, ಸೌಮ್ಯ ಸುಕುಮಾರ್. ಜತೆ ಕಾರ್ಯದರ್ಶಿ ದಿವ್ಯಾ ಅರುಣ್ ಕುಲಾಲಮಠ. ಸಂಘಟನಾ ಕಾರ್ಯದರ್ಶಿ ಸಂತೋಷ್ ಮರ್ತಾಜೆ, ಚಂಚಲಾಕ್ಷಿ ಕುಲಾಲಮಠ. ಕ್ರೀಡಾ ಕಾರ್ಯದರ್ಶಿ ಅಶೋಕ್ ಭಂಡಾರಿಬೆಟ್ಟು. ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಮರ್ತಾಜೆ, ವಲಯ ಸಂಚಾಲಕರು ನಿತೀಶ್ ಪಲ್ಲಿಕಂಡ, ಮಾಧ್ಯಮ ಪ್ರತಿನಿಧಿ ಪುನೀತ್ ಕಾಮಾಜೆ. ಕಾನೂನು ಸಲಹೆಗಾರರಾಗಿ ಮೀನಾಕ್ಷಿ ತುಂಬೆ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್ ಸುರತ್ಕಲ್, ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮತ್ತು ಗೌರವ ಸಲಹೆಗಾರರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.