ಬಂಟ್ವಾಳ

ಯುವಪೀಳಿಗೆಯ ಸಮಸ್ಯೆಗಳಿಗೆ ನೈತಿಕ ಶಿಕ್ಷಣದ ಕೊರತೆ ಕಾರಣ: ಪ್ರಭಂಜನ

ಇಂದಿನ ಯುವ ಪೀಳಿಗೆಯ ಸಮಸ್ಯೆಗಳಿಗೆ ನೈತಿಕ ಶಿಕ್ಷಣದ ಕೊರತೆ ಕಾರಣ. ನೈತಿಕ ಮೌಲ್ಯಗಳ ಕೊರತೆಯನ್ನು ಎದುರಿಸುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಎಂದು ವಿವೇಕ ವಂಶಿ ಫೌಂಡೇಶನ್ ಸಂಯೋಜಕ ಪ್ರಭಂಜನ ಹೇಳಿದ್ದಾರೆ.

ಜಾಹೀರಾತು

ಬಂಟ್ವಾಳ ಎಸ್.ವಿ.ಎಸ್. ದೇವಳ ಪದವಿಪೂರ್ವ ಕಾಲೇಜು, ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಹಾಗೂ ವಿವೇಕವಂಶಿ ಫೌಂಡೇಶನ್ ಮೈಸೂರು ಸಹಭಾಗಿತ್ವದಲ್ಲಿ ‘ನಿರ್ಮಾಣಂ’ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರು ದೇಶಕ್ಕೋಸ್ಕರ ಸಮಾಜಕ್ಕೋಸ್ಕರ ತನ್ನ ಊರಿಗೋಸ್ಕರ ತನ್ನ ಜನರಿಗೋಸ್ಕರ ಪ್ರಾಣತ್ಯಾಗ ಮಾಡಿದ್ದಾನೋ ಅಥವಾ ತನ್ನ ಜೀವನವನ್ನೇ ಸಮರ್ಪಿಸಿಕೊಂಡಿದ್ದಾನೋ ಅವನನ್ನು ನಿಜವಾದ ಅರ್ಥದಲ್ಲಿ ನಾಯಕ ಎನ್ನಬಹುದು. ಆದ್ದರಿಂದ ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂ, ಸೈನಿಕರು, ಸ್ವಾತಂತ್ರ ಹೋರಾಟಗಾರರು ನಮ್ಮ ಆದರ್ಶವಾದಾಗ ನಾವು ಆ ರೀತಿ ಆಗಲು ಸಾಧ್ಯ, ಎಂದು ತಿಳಿಸಿದರು

OPTIC WORLD

ರಾಜ್ಯದಾದ್ಯಂತ ವಿವಿಧ ಆಯಾಮದಲ್ಲಿ ಆಯಾಮದ ಮೂಲಕ ಮೌಲ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ನಿರ್ಮಾಣಂ ಎಂಬ ಯೋಜನೆ ಶ್ರೀರಾಮಕೃಷ್ಣ ಆಶ್ರಮದ ಶ್ರೇಷ್ಠರಾದ ಶ್ರೀ ಪುರುಷೋತ್ತಮಾನಂದ ಬರೆದಿರುವ ಇದುವರೆಗೂ 13 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಹಲವು ವಿದ್ಯಾರ್ಥಿಗಳ ಪಾಲಿನ ಬೆಳಕಾಗಿರುವ ವಿದ್ಯಾರ್ಥಿಗಾಗಿ ಎಂಬ ಪುಸ್ತಕದ ಮೇಲಿನ ಪರೀಕ್ಷೆಯಾಗಿದೆ. ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳನ್ನು ಅಧ್ಯಯನದಲ್ಲಿ ಏಕಾಗ್ರತೆ ವಿದ್ಯಾರ್ಥಿ ಜೀವನದಲ್ಲಿ ಪಾಲಿಸಬೇಕಾದ ನಿಯಮಗಳು, ಶಿಸ್ತು, ಶ್ರದ್ಧೆ ಸಣ್ಣ ಸಣ್ಣ ವಿಚಾರಗಳನ್ನು ಗಮನವಿಟ್ಟು ಮಾಡುವುದು ಸಮಯಪ್ರಜ್ಞೆ ವಿದ್ಯಾರ್ಥಿಗಳು ಭಗವಂತನಿಗೆ ಸಲ್ಲಿಸಬೇಕಾದ ಪ್ರಾರ್ಥನೆ ಈ ಎಲ್ಲಾ ವಿಚಾರಗಳನ್ನು ಕುರಿತು ಸ್ವಾಮೀಜಿಯವರು ಬರೆದಿದ್ದಾರೆ ಎಂದು ತಿಳಿಸಿದರು.

95,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಈ ಬಾರಿ ಬಂಟ್ವಾಳದಲ್ಲಿ ಹೆಚ್ಚು ವಿದ್ಯಾರ್ಥಿಗಳಿಂದ ಪ್ರಯತ್ನಿಸುತ್ತಿರುವ ರೇಖಾ ಹಾಗೂ ತಂಡಕ್ಕೆ ಕೃತಜ್ಞತೆ ತಿಳಿಸಿ, ಇಂದಿನ ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯದೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ವಿದ್ಯಾರ್ಥಿಗಳು ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವನ್ನು ಸರಿದೂಗಿಸಿಕೊಂಡು ಯಶಸ್ಸನ್ನು ಗಳಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಟಿ ತಾರಾನಾಥ್ ಕೊಟ್ಟಾರಿ ವಹಿಸಿದ್ದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಪನ್ಯಾಸಕ ಜಯಾನಂದ ಪೆರಾಜೆ ಶುಭ ಹಾರೈಸಿದರು. ಎಸ್.ವಿ.ಎಸ್. ದೇವಳ ವಿದ್ಯಾಸಂಸ್ಥೆ ಸಂಚಾಲಕ ಸುರೇಶ್ ಬಾಳಿಗಾ, ಪ್ರಾಂಶುಪಾಲ ಗಂಗಾಧರ ಆಳ್ವ, ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಮುಖ್ಯೋಪಾಧ್ಯಾಯಿನಿ ಸುರೇಖಾ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.