ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಶಕುಂತಳಾ ಎಂ.ಬಿ. ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
OPTIC WORLD
ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಗೌರವಾರ್ಪಣೆ ನಡೆಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಟ್ಲ ಗ್ರಾಮೀಣ ಸರಕಾರಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ಶುಭ ಹಾರೈಸಿದರು. ಶಿಕ್ಷಕರ ಸಂಘ, ಶಾಲಾ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ನಿವೃತ್ತ ಶಿಕ್ಷಕರ ವತಿಯಿಂದ ಗೌರವಿಸಲಾಯಿತು. ಮಜಿ ಶಾಲೆಯ ಲ್ಯಾಬಿಗೆ ಬೇಕಾದ ಗೋದ್ರೇಜ್ ಅನ್ನು ಶಿಕ್ಷಕಿ ಕೊಡುಗೆಯಾಗಿ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಂಟ್ವಾಳ ಅಧ್ಯಕ್ಷರಾದ ಜಯರಾಮ, ಪ್ರಧಾನ ಕಾರ್ಯದರ್ಶಿ ಯತೀಶ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡಿ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರುಮಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಾರಾಯಣ ಪೂಜಾರಿ, ಶಕುಂತಳಾ, ನಿವೃತ್ತ ಶಿಕ್ಷಣ ಸಂಯೋಜಕೀ ಪುಷ್ಪ, ನಿವೃತ್ತ ಶಿಕ್ಷಕಿ ಸಿಸಿಲಿಯ, ವಿವಿಧ ಶಾಲೆಗಳ ಶಿಕ್ಷಕ,ಶಿಕ್ಷಕಿಯರಾದ ಜೆಸಿಂತಾ, ನೇತ್ರಾವತಿ, ಗೀತಾ, ರೇವತಿ, ಸೇಸಪ್ಪ ನಾಯ್ಕ, ಮಾತೃಶ್ರೀ ಗೆಳೆಯ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರ ಹಾಜರಿದ್ದರು. ಶಿಕ್ಷಕಿಯರಾದ ಅನುಷಾ, ಜಯಲಕ್ಷ್ಮೀ, ಸಂಗೀತ ಶರ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು. ಶಿಕ್ಷಕಿ ಮುರ್ಷೀದಾಭಾನು ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸಂಪ್ರಿಯಾ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾಯ೯ಕ್ರಮ ನಿರೂಪಿಸಿದರು