ಬಂಟ್ವಾಳದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್ ) ಸ್ವಯಂಸೇವಕರಿಗೆ ಪ್ರೇರಣಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಿನ್ಸಿಪಾಲ್ ನರಸಿಂಹ ಭಟ್ ಎಚ್, ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶಂಕರ್ ರಾವ್ ಬಿ ವ್ಯಕ್ತಿತ್ವ ವಿಕಸನವೇ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಎಂದರು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಡೆಸುವುದರ ಮೂಲಕ ನಾಯಕತ್ವ ಮತ್ತು ತಂಡಗಳ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು.
OPTIC WORLD
ಕಾರ್ಗಿಲ್ ವಿಜಯ ದಿವಸ್ ಮತ್ತು ರಾಷ್ಟ್ರೀಯ ಭಾವೈಕ್ಯತೆ ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳಿಂದ ರಚಿತವಾದ ಸೇವಾ ಕಲರವ ಯುವ ಮನಸ್ಸುಗಳ ನವ ಚಿಂತನ ಎನ್ನುವ ಪೋಸ್ಟರ್ಸ್ ಗಳನ್ನು ಪ್ರದರ್ಶಿಸಲಾಯಿತು.
ಸಭೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥರಾದ ಮೋಹನ್ ರಾಜ್ ಜಿ.ಎಸ್, ಮಹಿಳಾ ಘಟಕದ ಮುಖ್ಯಸ್ಥರಾದ ಭುವನೇಶ್ವರಿ, ರೆಡ್ ಕ್ರಾಸ್ ಸಂಯೋಜಕರಾದ ಉದಯ್ ಕುಮಾರ್, ಕ್ರೀಡಾಧಿಕಾರಿಗಳಾದ ರಿತಿಕಾ ಕೋಟ್ಯಾನ್ ಎಚ್, ಉದ್ಯೋಗ ಮತ್ತು ತರಬೇತಿ ಅಧಿಕಾರಿಯಾದ ಮಹೇಶ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಯಾದ ಭಾಸ್ಕರ್ ಎಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕ ಸಿಂಚನ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯಕ್ರಮಾಧಿಕಾರಿಯಾದ ವಿಕೇಶ್ ವಂದಿಸಿದರು.