MOHAN PS
OPTIC WORLD
ಬಂಟ್ವಾಳ: ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮುಂದಿನ ಒಂದೂವರೆ ವರ್ಷಗಳ ಅವಧಿಗೆ ಹಾಲಿ ಉಪಾಧ್ಯಕ್ಷ ಮೋಹನ ಪಿ.ಎಸ್. ಆಯ್ಕೆಗೊಂಡಿದ್ದಾರೆ.
MOHAN PS
ಸುದೀರ್ಘ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಸ್.ಆರ್.ಸತೀಶ್ಚಂದ್ರ ಇತ್ತೀಚೆಗೆ ಅಧ್ಯಕ್ಷ ಹುದ್ದೆ ಸಹಿತ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ರೋಡಿನ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೋಹನ ಪಿ.ಎಸ್.ಆಯ್ಕೆಗೊಂಡರು. ಚುನಾವಣೆಯನ್ನು ರಿಟರ್ನಿಂಗ್ ಅಧಿಕಾರಿಯವರಾದ ಡಾ ಜ್ಯೋತಿ ಡಿ ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಣಶೇಖರ್ ಧನ್ಯವಾದ ಅರ್ಪಿಸಿದರು