OPTIC WORLD
ಕಡೇಶಿವಾಲಯ ಗ್ರಾಮದ ಯುವಕನೋರ್ವ ತನ್ನ ಸ್ಕೂಟರ್ ಹಾಗೂ ಮೊಬೈಲ್ ಅನ್ನು ಬಂಟ್ವಾಳ ಪುಂಜಾಲಕಟ್ಟೆ ರಸ್ತೆಯ ಸಮೀಪ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಬಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಬಳಿಕ ಶವ ನೇತ್ರಾವತಿ ನದಿಯಲ್ಲಿ ದೊರಕಿದೆ. ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಜುಲೈ 27ರಂದು ಕಡೇಶಿವಾಲಯದ ಹೇಮಂತ್ ಆಚಾರ್ಯ (21) ನಾಪತ್ತೆಯಾಗಿದ್ದರು. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. 28ರಂದು ನೇತ್ರಾವತಿ ನದಿ ಪಕ್ಕ ಅವರ ಸ್ಕೂಟರ್ ಮತ್ತು ಅದರಲ್ಲಿ ಮೊಬೈಲ್ ಪತ್ತೆಯಾಗಿತ್ತು. ಹೀಗಾಗಿ ನದಿಗೆ ಹಾರಿರಬಹುದು ಎಂಬ ಶಂಕೆಯಿಂದ ಹುಡುಕಾಟ ಅಂದೇ ಆರಂಭಗೊಂಡಿತ್ತು. ಇದೀಗ ಜುಲೈ 31ರಂದು ಅವರು ಶವವಾಗಿ ಪತ್ತೆಯಾಗಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ ಗುರುವಾರ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ತಂಡ ಹಾಗೂ ಎನ್.ಡಿ.ಆರ್.ಎಫ್. ಹುಡುಕಾಟ ನಡೆಸಿತ್ತು. ಸಂಜೆ ಮತ್ತಷ್ಟು ಶೋಧ ಕಾರ್ಯ ನಡೆಸಿದ ವೇಳೆ ಮೃತದೇಹ ಪತ್ತೆಯಾಗಿದೆ.