ಬಂಟ್ವಾಳ: ಅಮೃತ ಭಾರತ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಅಭಿವೃದ್ಧಿಯಾಗುತ್ತಿದ್ದು, ಕಾಮಗಾರಿ ವೇಗ ಪಡೆದುಕೊಂಡಿದೆ. ಅಮೃತ್ ಭಾರತ ನಿಲ್ದಾಣ ಯೋಜನೆಯಡಿ 28.49 ಕೋಟಿ ರೂಪಾಯಿಯಲ್ಲಿ ಈ ನಿಲ್ದಾಣದ ಪ್ರಥಮ ಹಂತದ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಂಪೂರ್ಣ ಕಾಮಗಾರಿಯು ಆರು ತಿಂಗಳಲ್ಲಿ ಮುಗಿಯಲಿದೆ.
Railway Mysore Division DRM about Bantwal Railway Station
ಈ ವಿಷಯವನ್ನು ಗುರುವಾರ ಬಂಟ್ವಾಳ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮೈಸೂರು ಡಿವಿಷನಲ್ ರೈಲ್ವೆ ಮೆನೇಜರ್ ಮುದಿತ್ ಮಿತ್ತಲ್ ತಿಳಿಸಿದರು. 2024ರಲ್ಲಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಅದಾದ ಬಳಿಕ ಕೆಲಸ ಕಾರ್ಯಗಳು ವೇಗದಲ್ಲಿ ನಡೆಯುತ್ತಿದ್ದು, ಈಗಾಗಲೇ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
YOUTUBE LINK: Railway Mysore Division DRM about Bantwal Railway Station
OPTIC WORLD
ಫರಂಗಿಪೇಟೆಯಲ್ಲಿ ಹಾಲ್ಟ್ ಸ್ಟೇಶನ್ ಮಾಡುವತ್ತ ಕೆಲಸಗಳು ನಡೆಯುತ್ತಿದ್ದು, ಅಲ್ಲಿ ಮೂರು ಮಾರ್ಗಗಳ ಕ್ರಾಸಿಂಗ್ ಸ್ಟೇಶನ್ ಆಗಿ ಪರಿವರ್ತನೆಯಾಗಲಿದೆ. ರೈಲ್ವೆ ಜಾಗವನ್ನು ಅದಕ್ಕೆ ಸದ್ಬಳಕೆ ಮಾಡಲಾಗುವುದು ಎಂದವರು ಮಾಹಿತಿ ನೀಡಿದರು.
ನಿಲ್ದಾಣ ಸುರಕ್ಷತೆಗೆ ಆದ್ಯತೆ:
ಬಂಟ್ವಾಳ ರೈಲ್ವೆ ನಿಲ್ದಾಣದ ಸುರಕ್ಷತೆಗೆ ಗರಿಷ್ಠ ಗಮನಹರಿಸಲಾಗುವುದು. ಶುಕ್ರವಾರದಿಂದಲೇ ರೈಲ್ವೆ ನಿಲ್ದಾಣದ ಭದ್ರತೆಗೆ ಇಬ್ಬರು ಸಿಬ್ಬಂದಿ ನಿಯೋಜನೆಯಾಗಲಿದ್ದಾರೆ, ನಿಲ್ದಾಣ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಬಳಿಕ ಖಾಯಂ ಆಗಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ನಿಲ್ದಾಣ ಸುತ್ತಮುತ್ತಲಿನ ಜಾಗವನ್ನು ದುರುಪಯೋಗಪಡಿಸುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದವರು ತಿಳಿಸಿದರು.
ಪ್ಲಾಟ್ ಫಾರ್ಮ್ ನಲ್ಲಿ ನಡೆಯುವ ಕೆಲಸಗಳ ಸಹಿತ ರೈಲ್ವೆ ಹಳಿ, ವಿದ್ಯುದೀಕರಣ ವ್ಯವಸ್ಥೆ ಹಾಗು ಸೇತುವೆಯನ್ನು ಪರಿಶೀಲಿಸಿದ ಅವರು, ಕೆಲವೊಂದು ಸಲಹೆ ಸೂಚನೆಗಳನ್ನೂ ನೀಡಿದರು. ಈ ಸಂದರ್ಭ ಹೋರಾಟಗಾರರಾದ ಜಿ.ಕೆ.ಭಟ್ ಹಾಗೂ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.