ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ, ಬಿ.ಮೂಡ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ ಗುರುವಾರ ಏರ್ಪಡಿಸಿದ್ದ ಜನಜಾಗೃತಿ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಸುಧೀರ್ ಮುರೊಳ್ಳಿ ಮತ್ತು ಎಂ.ಜಿ. ಹೆಗಡೆ, ಬಿಜೆಪಿ ಪಕ್ಷ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಟ್ವಾಳ ಶಾಸಕರು ಒಂದು ತಿಂಗಳ ಒಳಗೆ ಕೆಡಿಪಿ ಸಭೆ ಹಾಗೂ ಅಕ್ರಮ ಸಕ್ರಮ ಸಮಿತಿ ಸಭೆ ಕರೆಯದಿದ್ದರೆ ಕಾಂಗ್ರೆಸ್ ವಿನೂತನ ಹೋರಾಟ ನಡೆಸಲಿದೆ ಎಂದು ಸುಧೀರ್ ಹೇಳಿದರು. ಎಂ.ಜಿ.ಹೆಗಡೆ ಮಾತನಾಡಿ, ಸಂಸ್ಜೃತ ಶಿಕ್ಷಣ ಪ್ರತಿಪಾದಿಸುವವರು ಅದನ್ನು ಎಷ್ಟು ಕಲಿತಿದ್ದಾರೆ ಎಂದು ಪ್ರಶ್ನಿಸಿ ಬಿಜೆಪಿ ತಾವೇ ಕಾನೂನು ಮಾಡಿ, ತಾವೇ ಪ್ರತಿಭಟನೆ ಮಾಡುತ್ತಾರೆ. ಎಲ್ಲರೂ ಒಟ್ಟಾಗಿ ಬದುಕುವ ಹಂಬಲವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಮಾನ್ಯರ ಪರವಾಗಿಯೇ ಕೆಲಸ ಮಾಡಿಕೊಂಡು ಬಂದಿದೆ. ಸಾಮಾನ್ಯ ಜನರಿಗೆ, ಬಡವರಿಗೆ, ಹಿಂದುಳಿದ ವರ್ಗದವರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ ಎಂದರು.
OPTIC WORLD
ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಅಶ್ವನಿ ಕುಮಾರ್ ರೈ, ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷ ಅಬ್ಬಾಸ್ ಆಲಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಸಂಜೀವ ಪೂಜಾರಿ ಬಿರ್ವ, ಜಯಂತಿ ವಿ. ಪೂಜಾರಿ, ಐಡಾ ಸುರೇಶ್, ಲವೀನಾ ಮೊರಾಸ್, ಸಫ್ವಾನ್, ವಿನಯ ಕುಮಾರ ಸಿಂಧ್ಯ, ಸುದರ್ಶನ ಜೈನ್, ಸುದೀಪ್ ಶೆಟ್ಟಿ ಮಾಣಿ, ಪದ್ಮಶೇಖರ ಜೈನ್, ಗಣೇಶ್ ಪೂಜಾರಿ, ಬಿ.ಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಲಾಕ್ಷ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ಪ್ರಮುಖರಾದ ಜಗದೀಶ ಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು