OPTIC WORLD
ಬಂಟ್ವಾಳ :ಏರ್ಯ ಲಕ್ಷ್ಮೀನಾರಾಯಣ ಆಳ್ವ ಫೌಂಡೇಶನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ, ಸಾಂಸ್ಕೃತಿಕ ಕಮ್ಮಟ ಏರ್ಯ ಬೀಡುವಿನಲ್ಲಿ ನಡೆಯಿತು.
ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ವಿ. ಸು. ಭಟ್, ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ. ರಂಗೋಲಿ, ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕುಮಾರ್, ಕಲಾವಿದ ಸದಾಶಿವ ಡಿ ತುಂಬೆ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಉಪಸ್ಥಿತರಿದ್ದರು. ಕೇಶವ ಎಚ್ ಕಟೀಲು ಸ್ವಾಗತಿಸಿ, ಏರ್ಯ ರ ನೆನಪು ಗಳನ್ನು ಮೆಲುಕು ಹಾಕಿದರು.
ನಲ್ಕೆಮಾರು ಶಾಲೆಯ ಶಿಕ್ಷಕ ಜಗನ್ನಾಥ್ ವಂದಿಸಿದರು.ಕಾರ್ಯಕ್ರಮ ಸಂಯೋಜಕ ದಾಮೋದರ್ ಮಾಸ್ಟರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಹಾಬಲೇಶ್ವರ ಹೆಬ್ಬಾರ್ ಓದುವ ಹವ್ಯಾಸ, ಚಿತ್ರಕಲಾ ಶಿಕ್ಷಕ ತಾರನಾಥ್ ಕೈರಂಗಳ ಚಿತ್ರ ಕಮ್ಮಟ, ಶಿಕ್ಷಕ ವಿಠಲ್ ನಾಯಕ್ ಮಕ್ಕಳ ಗೀತಾ ಸಾಹಿತ್ಯ ನಡೆಸಿಕೊಟ್ಟರು. ಭಾಗವಹಿಸಿದ ಮಕ್ಕಳಿಗೆ ಭಾಸ್ಕರ ಅಡ್ವಾಳ ಅವರು ಉಚಿತ ವಾಗಿ ನೀಡಿದ ನಮ್ಮೆಲ್ಲರ ಪ್ರಕಾಶಕ್ಕಾಗಿ ಪುಸ್ತಕವನ್ನು ನೀಡಲಾಯಿತು.
ಸಾಹಿತ್ಯ ಕಮ್ಮಟದ ಪ್ರಯುಕ್ತ ನಡೆದ ಮಿನಿಕತೆ ಸ್ಪರ್ಧೆಯಲ್ಲಿ ಪ್ರಥಮ. ಪ್ರತೀತಿ ಪಿ ಎಸ್, ದ್ವಿತೀಯ. ಅವಿಲ್ ಡಿ ಸೋಜ, ಕವನ ಸ್ಪರ್ಧೆ ಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಆರ್ ಸೌರಭ್,ದ್ವಿತೀಯ ಯಸ್ವಿತ್ ಎಚ್. ಪ್ರೌಢ ವಿಭಾಗದಲ್ಲಿ ಪ್ರಥಮ ದೃತಿ, ದ್ವಿತೀಯ ಖುಷಿ . ಕಾಲೇಜು ವಿಭಾಗ ಪ್ರಥಮ ಧನ್ವಿತಾ ಕಾರಂತ್, ದ್ವಿತೀಯ ಆತ್ಮಿಕಾ ರೈ ಬಹುಮಾನವನ್ನು ಪಡೆದುಕೊಂಡರು.