ಬಂಟ್ವಾಳ

MESCOM Bantwal: ಮೆಸ್ಕಾಂನಿಂದ ಬಂಟ್ವಾಳದಲ್ಲಿ ಜನಸಂಪರ್ಕ ಸಭೆ, ಅಹವಾಲು ಸ್ವೀಕಾರ

OPTIC WORLD

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಬಂಟ್ವಾಳ ನಂ.೧, ೨ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳದ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು

ಈ ಸಂದರ್ಭ ಆಗಮಿಸಿದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಹವಾಲುಗಳನ್ನು ಆಲಿಸಿದರು. ಬಂಟ್ವಾಳ ಎಕ್ಸಿಕ್ಯುಟಿವ್ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ನಾರಾಯಣ ಭಟ್  ಮತ್ತು ಸುಬ್ರಹ್ಮಣ್ಯ ಪ್ರಸಾದ್  ಉಪಸ್ಥಿತರಿದ್ದು, ಅಹವಾಲು ಗಳನ್ನು ಆಲಿಸಿದರು. ಸ್ಥಳದಲ್ಲಿ ಸುಮಾರು 12ಕ್ಕೂ ಅಧಿಕ ದೂರುಗಳು ಬಂದರೆ, ದೂರವಾಣಿ ಮೂಲಕವೂ ಅಹವಾಲುಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಕೃಷ್ಣರಾಜ್, ಗ್ರಾಹಕರು ಇಪ್ಪತ್ತು ರೂಪಾಯಿಗಳಿಗೆ ಬೇಕಾಗಿ ಕಚೇರಿಗೆ ಬರಬೇಕು ಎಂದಿಲ್ಲ, ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿಕೊಳ್ಳಿ, ಕ್ಯೂ ಆರ್ ಕೋಡ್ ಅನ್ನು ಉಪಯೋಗಿಸಿಕೊಳ್ಳಿ ಎಂದರು.

ಪವರ್ ಮ್ಯಾನ್ ಕೆಲಸದ ವೈಖರಿ, ಪವರ್ ಮ್ಯಾನ್ ಗಳಿಗೆ ಲ್ಯಾಡರ್ ಒದಗಿಸುವ ಕುರಿತು, ಹಳತಾದ ವಿದ್ಯುತ್ ತಂತಿಗಳು, ಸಣ್ಣ ಗಾಳಿಗೂ ಕರೆಂಟ್ ಹೋಗುವ ವಿಚಾರ ಹಾಗೂ ಮೀಟರ್ ರೀಡರ್ ಸಮಯಕ್ಕೆ ಸರಿಯಾಗಿ ಬಾರದ ವಿಚಾರ ಸಹಿತ ಅಧಿಕಾರಿಗಳ ಸ್ಪಂದನೆ ಹಾಗೂ ಐಪಿ ಸೆಟ್ ಗೆ ವಿದ್ಯುತ್ ಒದಗಿಸುವ ಬಗ್ಗೆ ಹಲವರು ತಮ್ಮ ಅಹವಾಲು ಮಂಡಿಸಿದರು. ಸಜೀಪಮೂಡ ಗ್ರಾಪಂ ಸದಸ್ಯ ಅಬ್ದುಲ್ ಕರೀಂ, ಅಮ್ಮುಂಜೆ ಗ್ರಾಮ  ಪಂಚಾಯತಿ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ  ನಾವೂರಿನ ಸುನಿಲ್ ಲೋಬೊ, ಸಮದ್, ಸ್ಟ್ಯಾನಿ ಜೆರಾಲ್ಡ್ ಸಿಕ್ವೇರಾ  ಮತ್ತಿತರರು ವಿಚಾರ ಮಂಡಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts