ಮಡಂತ್ಯಾರಿನಲ್ಲಿ ನಡೆದ ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ ಮೃದಂಗ ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳದ ಸದಸ್ಯೆ, ಬಂಟ್ಚಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ ಅವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
OPTIC WORLD
ಈ ಸಂದರ್ಭ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ವಲಯ ಉಪಾಧ್ಯಕ್ಷರಾದ ರಂಜಿತ್ ಎಚ್.ಡಿ. , ಸಂತೋಷ್ ಕುಮಾರ್ ಶೆಟ್ಟಿ, ವಲಯಾಧಿಕಾರಿಗಳಾದ ಅಶೋಕ್ ಗುಂಡ್ಯಲ್ಕೆ, ರವಿಚಂದ್ರ ಪಾಟಾಳಿ, ಪೂರ್ವ ವಲಯಾಧಿಕಾರಿಗಳಾದ ರಾಧಕೃಷ್ಣ ಬಂಟ್ವಾಳ, ಡಾ. ಬಾಲಕೃಷ್ಣ ಕುಮಾರ್ ಉಪಸ್ಥಿತರಿದ್ದರು.