ಬಂಟ್ವಾಳ: ಪ್ರಸಕ್ತ ನಗರವಾಗಿ ರೂಪುಗೊಳ್ಳುತ್ತಿರುವ ಗ್ರಾಮೀಣ ಪ್ರದೇಶ ಸಿದ್ದಕಟ್ಟೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಇದರಿಂದಾಗಿ ಸದಾಶಿವ ಶೆಟ್ಟಿಗಾರ್ ಮತ್ತು ಪದ್ಮನಾಭ ಶೆಟ್ಟಿಗಾರ್ ಅವರಂಥ ಪ್ರಬುದ್ಧ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಜನ ಮನ್ನಣೆ ಗಳಿಸಿದ್ದಾರೆ ಎಂದು ವಿಮರ್ಶಕ ಶಾಂತಾರಾಮ ಕುಡ್ವ ಹೇಳಿದರು.
ಇಲ್ಲಿನ ಸಿದ್ಧಕಟ್ಟೆ ಯಾಕ್ಷಾಭಿಮಾನಿಗಳು ಮತ್ತು ಪೂಂಜ ಯಕ್ಷ ಮಿತ್ರರು ವತಿಯಿಂದ ಸಿದ್ಧಕಟ್ಟೆ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಹಿರಿಯ ಬಣ್ಣದ ವೇಷಧಾರಿ ದಿ.ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಹಾಸ್ಯ ಕಲಾವಿದ ದಿ.ಪದ್ಮನಾಭ ಶೆಟ್ಟಿಗಾರ್ ಅವರ ’ನುಡಿ ನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
OPTIC WORLD
ಕಲಾವಿದರಾದ ಸದಾಶಿವ ಶೆಟ್ಟಿ ಸಿದ್ಧಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಜನಾರ್ದನ ಅಮುಂಜೆ ನುಡಿ ನಮನ ಸಲ್ಲಿಸಿದರು. ಸಂಗಬೆಟ್ಟು ವೀರಭದ್ರ ಮಹಮ್ಮಾಯಿ ದೇವಸ್ಥಾನ ಗುರಿಕಾರ ಚಂದ್ರಹಾಸ ಶೆಟ್ಟಿಗಾರ್, ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ಬಾಲಕೃಷ್ಣ ಶೆಟ್ಟಿಗಾರ್, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಹಕ್ಕೇರಿ, ರೋಟರಿ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಪ್ರಮುಖರಾದ ರತ್ನಕುಮಾರ್ ಚೌಟ, ಸೀತಾರಾಮ ಶೆಟ್ಟಿ ಅಂಗರಕುಮೇರು, ರಮೇಶ್ ಶೆಟ್ಟಿ ಮುಂಬೈ, ಗಣೇಶ ಶೆಟ್ಟಿ ಅರಳ, ವಕೀಲ ಸುರೇಶ ಶೆಟ್ಟಿ, ಜಗದೀಶ್ ಕೊಯಿಲ, ಹರಿಪ್ರಸಾದ್ ಭಟ್ ಹೋರಂಗಳ, ವಸಂತ ಶೆಟ್ಟಿ ಕೇದಗೆ, ಯಶೋಧರ ಶೆಟ್ಟಿ ದಂಡೆ, ಉಮೇಶ್ ಶೆಟ್ಟಿ ಕೊನೆರೋಟ್ಟು, ಸಂಘಟಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಶಶಿಧರ್ ಶೆಟ್ಟಿ ಕಲ್ಲಾಪು, ರಾಜೇಶ್ ಶೆಟ್ಟಿ ಕೊನೆರೊಟ್ಟು ಭಾಗವಹಿಸಿದ್ದರು.ರೋಟರಿ ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಸ್ವಾಗತಿಸಿ, ಉಪನ್ಯಾಸಕ ಯೋಗೀಶ್ ಕೈರೋಡಿ ವಂದಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ ವಂದಿಸಿದರು.