ಭಾನುವಾರವೂ ಮಳೆ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನಾದ್ಯಂತ ವ್ಯಾಪಕ ಹಾನಿಯಾಗಿದೆ. ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಮರಗಳು ಉರುಳಿದ್ದರೆ, ಕೆಲವೆಡೆ ವಿದ್ಯುತ್ ಕಂಬಗಳೂ ಬಿದ್ದ ಘಟನೆ ನಡೆದಿದೆ.
OPTIC WORLD
ಬಂಟ್ವಾಳ ಕಸಬಾ ಗ್ರಾಮದ ಮುಗ್ದಲ್ ಗುಡ್ಡೆ ನಿವಾಸಿ ಸಂಜೀವ ಸಪಲ್ಯ ಅವರ ಮನೆಗೆ ಮರ ಬಿದ್ದು ಮನೆಗೆ ಹಾನಿ ಆಗಿರುತ್ತದೆ ಅಮ್ಟಾಡಿ ಗ್ರಾಮದ ದೇವಿನಗರ ಎಂಬಲ್ಲಿ ಲೋಕಯ ಮೂಲ್ಯ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಶಂಭೂರು ಗ್ರಾಮದ ನರ್ಸರಕೋಡಿ ಎಂಬಲ್ಲಿ ಬಾಬು ಸಪಲ್ಯ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿಯ ಕಮಲಪೂಜಾರಿಯವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಯಾಗಿರುತ್ತದೆ. ಅಮ್ಮುಂಜೆ ಗ್ರಾಮದ ಕಲಾಯಿ ದೇವದಾಸ ಬೆಳ್ಚಾಡ ರವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ನಾವೂರು ಕೊಂಪೆ ಎಂಬಲ್ಲಿ ವಸಂತ ಪೂಜಾರಿ ರವರ ಕೊಟ್ಟಿಗೆ ಗೆ ಮರ ಬಿದ್ದು ಹಾನಿಯಾಗಿದೆ. ಬಿಮೂಡ ಗ್ರಾಮದ ಕಾಮಾಜೆ ಎಂಬಲ್ಲಿ ಗಾಳಿಗಮಳೆಗೆ ರಸ್ತೆಗೆ ತೆಂಗಿನ ಮರ ಬಿದ್ದಿರುತ್ತದೆ
ಅಮ್ಮುಂಜೆ ಗ್ರಾಮದ ದೇವಕಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ಬಂಟ್ವಾಳ ಕಸಬಾ ಗ್ರಾಮದ ಮುಗ್ದಲ್ ಗುಡ್ಡೆ ನಿವಾಸಿ ಸಂಜೀವ ಸಪಲ್ಯ ಅವರ ಮನೆಗೆ ಮರ ಬಿದ್ದು ಮನೆಗೆ ಹಾನಿ ಆಗಿರುತ್ತದೆ. ಕೇಪು ಗ್ರಾಮದ ಚಿಮಿನಡ್ಕ ಎಂಬಲ್ಲಿ ಮಹಮ್ಮದ್ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಮಂಚಿ ಗ್ರಾಮದ ಯಮುನಾ ಮೂಲ್ಯ ರವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಗಿಡ ಬಿದ್ದು ಭಾಗಶಃ ಹಾನಿ ಆಗಿರುತ್ತದೆ. ಕಳ್ಳಿಗೆ ಗ್ರಾಮದ ಪುರುಷೋತ್ತಮ ಎಂಬವರ ಮನೆಗೆ ಮರ ಬಿದ್ದು ತೀವ್ರ ಹಾನಿ ಆಗಿರುತ್ತದೆ. ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಎಂಬಲ್ಲಿ ವಿದ್ಯುತ್ ಕಂಬಗಳು ತೀವ್ರಗಾಳಿಯಿಂದಾಗಿ ಹೆದ್ದಾರಿಗೆ ಬಿದ್ದಿರುತ್ತದೆ ಬಿ.ಮೂಡ ಗ್ರಾಮದ ಅಗ್ರಬೈಲು ಎಂಬಲ್ಲಿಯ ಸುಂದರಿ ನಾರಾಯಣ ಮೂಲ್ಯ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ.