ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡು ಆಡಳಿತ ಮಂಡಳಿಯ ಸಹಕಾರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕ ಪಾಲೆದ ಕೆತ್ತೆಯ ಕಷಾಯ ವಿತರಣೆ ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ದೇವಳದ ಪ್ರಧಾನ ಅರ್ಚಕರಾದ ರಘುಪತಿ ಭಟ್ ಪೂಜೆ ನೆರವೇರಿಸಿದ ನಂತರ ಕಷಾಯ ವಿತರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ವಿಶ್ವನಾಥ್, ಕೆ.ಸೀತಾರಾಮ್ ಶೆಟ್ಟಿ, ಎನ್.ಶಿವಶಂಕರ್, ಸುಭಾಶ್ಚಂದ್ರ ಜೈನ್, ರಾಜೇಶ್ ಎಲ್. ನಾಯಕ್, ಶೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಪದ್ಮನಾಭ ರೈ, ಸತೀಶ್ ಕುಮಾರ್ ಕಾರ್ತಿಕ್, ಪರಮೇಶ್ವರ ಮೂಲ್ಯ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ದಾಮೋದರ್ ಮಾಸ್ಟರ್ ಏರ್ಯ, ಸ್ವಜೇಶ್ ಜೈನ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರುತುಳುಕೂಟದ ಕಾರ್ಯದರ್ಶಿ ಎಚ್ಕೆ ನಯನಾಡು ಸ್ವಾಗತಿಸಿ ವಂದಿಸಿದರು. ಬಿ.ಸಿ.ರೋಡು ಸುತ್ತ ಮುತ್ತಲಿನ ಸುಮಾರು 500 ಕ್ಕಿಂತಲೂ ಹೆಚ್ಚು ಜನರು ಕಷಾಯ ಸ್ವೀಕರಿಸಿದರು.
OPTIC WORLD
CHESS TRAINING AT RAKTHESHWARI TEMPLE BCROAD