ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ರೈಲಿನಡಿ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರ ಗುರುತು ಪತ್ತೆಯಾಗಿಲ್ಲ.
OPTIC WORLD
ಸುಮಾರು 11 ಗಂಟೆ ವೇಳೆ ಗೂಡ್ಸ್ ರೈಲು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಸಾಗುವ ವೇಳೆ ಹೆದ್ದಾರಿ ಮೇಲ್ಸೇತುವೆ ಕೆಳಗೆ ವ್ಯಕ್ತಿಯೊಬ್ಬರು ಹಳಿಯಲ್ಲಿ ಮಲಗಿದ್ದು, ಆತನ ಮೇಲೆ ರೈಲು ಹಾದು ಹೋಗಿದೆ. ಘಟನೆಯಿಂದ ದೇಹದ ಮಧ್ಯಭಾಗ ಛಿದ್ರವಾಗಿದೆ. ಸುಮಾರು 30ರಿಂದ 35ರ ವಯಸ್ಸಿನ ಈ ವ್ಯಕ್ತಿ ಎಲ್ಲಿಯವರು ಎಂದು ತಿಳಿದುಬಂದಿಲ್ಲ. ಈತನ ಕೈಯಲ್ಲಿ ಹಳೇಯದೊಂದು ಹಚ್ಚೆ ಇದ್ದು, ಅದರಲ್ಲಿ ರಚ್ಚು ಎಂದು ಬರೆದಿದೆ. ರೈಲ್ವೆ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಗುರುತು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.