ಸಾಂದರ್ಭಿಕ ಚಿತ್ರ
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೊಡಂಗೆ, ಶಾಂತಿಯಂಗಡಿ, ಪರ್ಲಿಯಾ ಪರಿಸರದಲ್ಲಿ ಬೀದಿನಾಯಿಗಳ ಕಾಟ ಜಾಸ್ತಿಯಾಗಿದೆ.ಕೈಕಂಬ, ಕೊಡಂಗೆ, ಶಾಂತಿಯಂಗಡಿ, ತಲಪಾಡಿ, ಮಫತ್ ಲಾಲ್ ಲೇಔಟ್ ಪರಿಸರದಲ್ಲೂ ಬೀದಿನಾಯಿಗಳಿಂದ ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಸ್ಥಳೀಯರು ದೂರಿದ್ದಾರೆ.ಶಾಲೆಗೆ ಹೋಗುವ ಮಕ್ಕಳನ್ನು ಹಿಂಬಾಲಿಸಿ ಕಚ್ಚುವವರೆಗೂ ಇದು ಮುಂದುವರಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್, ಇದೊಂದು ಗಂಭೀರ ವಿಷಯವಾಗಿದ್ದು, ಬೆಳಗ್ಗೆಯೂ ಬೀದಿನಾಯಿಗಳು ಗುಂಪುಗುಂಪಾಗಿ ಬಂದು ನಡೆದುಕೊಂಡು ಹೋಗುವ ಮಕ್ಕಳನ್ನು ಹಿಂಬಾಲಿಸುತ್ತವೆ. ಅಪಾಯಕಾರಿಯಾಗಿರುವ ಇವುಗಳನ್ನು ನಿಯಂತ್ರಿಸಲು ಪುರಸಭಾಡಳಿತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
OPTIC WORLD