ತಾಯಿಯ ಹೆಸರಲ್ಲಿ ಗಿಡ ನೆಡುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬಂಟ್ವಾಳ ಮಂಡಲದ ಹಿರಿಯ ಕಾರ್ಯಕರ್ತ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಅವರಿಗೆ ಸಸಿ ಹಸ್ತಾಂತರ ಮಾಡಲಾಯಿತು.
ಪ್ರಮೋದ್ ಅವರ ಪತ್ನಿ, ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಉಪಸ್ಥಿತರಿದ್ದರು. ಮಂಡಲದ ಒಬಿಸಿ ಮೋರ್ಚಾ ದ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಜಿಲ್ಲಾ ಓಬಿಸಿ ಅಧ್ಯಕ್ಷರಾದ ಮಹೇಶ್ ಜೋಗಿ ಮತ್ತು ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿಯವರಾದ ಮೋನಪ್ಪ ದೇವಸ್ಯ, ಜಿಲ್ಲಾ ಒಬಿಸಿ ಉಪಾಧ್ಯಕ್ಷರಾದ ಹಾಗೂ ಬಂಟ್ವಾಳ ಒಬಿಸಿ ಪ್ರಭಾರಿಯಾದ ವಿನೋದ್ ಬೆಳ್ಳೆಯಾರು ಮತ್ತು ಪ್ರ. ಕಾರ್ಯದರ್ಶಿ ಶಶಿಧರ ಕಲ್ಮಂಜ, ಜಿಲ್ಲಾ ಒಬಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಚಿದಾನಂದ ಕಲ್ಲಡ್ಕ , ಬಂಟ್ವಾಳ ಒ ಬಿ ಸಿ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ, ಮೋಹನ್ ದಾಸ್ ಕೊಟ್ಟಾರಿ, ಬಂಟ್ವಾಳ ಒಬಿಸಿ ಮಂಡಲದ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
OPTIC WORLD