OPTIC WORLD
ಬಂಟ್ವಾಳ ತಾಲೂಕಿನ ಗ್ರಾಮಾಡಳಿತಾಧಿಕಾರಿಗಳಿಗೆ ಸರಕಾರ ಒದಗಿಸಿದ ಕ್ರೋಮ್ ಬುಕ್ (ಲ್ಯಾಪ್ ಟಾಪ್ )ಗಳನ್ನು ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿತರಿಸಿದರು.
CHESS TRAINING AT RAKTHESHWARI TEMPLE BCROAD
ಈ ಸಂದರ್ಭ ಮಾತನಾಡಿದ ಅವರು, ಜನರ ನಿರೀಕ್ಷೆಗಳಿಗೆ ತಕ್ಕಂತೆ ಯಾವುದೇ ದೂರುಗಳು ತನ್ನವರೆಗೆ ಬಾರದಂತೆ ಕೆಲಸ ನಿರ್ವಹಿಸಿ, ಅಧಿಕಾರಿಗಳ ಜನಪರಕಾರ್ಯದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ಒಟ್ಟು 21 ಮಂದಿ ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ 15 ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ದಿನ ಹಂಚಿಕೆ ಮಾಡಲಾಗಿದ್ದು, ಬಾಕಿ ಉಳಿದವರಿಗೆ ಸರಕಾರದಿಂದ ಲ್ಯಾಪ್ ಟಾಪ್ ಒದಗಿಸಲು ಸರಕಾರ ಹಂತದಲ್ಲಿ ಮುಂಬರುವ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಶಾಸಕರು ತಿಳಿಸಿದರು
ತಹಸೀಲ್ದಾರ್ ಡಿ.ಅರ್ಚನಾ ಭಟ್, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ನವೀನ್ ಬೆಂಜನಪದವು, ಕಂದಾಯ ನಿರೀಕ್ಷಕರಾದ ಜನಾರ್ದನ ಜೆ, ವಿಜಯ್, ರವಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಅನಿಲ್ ಕೆ ಪೂಜಾರಿ, ಗೌರವಾಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ವೈಶಾಲಿ ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.