OPTIC WORLD
ಬಂಟ್ವಾಳ: ಬಂಟ್ವಾಳ ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ದನ ಚಂಡ್ತಿಮಾರ್ (55) ಸೋಮವಾರ ನಸುಕಿನ ಜಾವ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಓರ್ವ ಪುತ್ರ ಸಹಿತ ಬಂಧು ಬಾಂಧವರನ್ನು ಅವರು ಅಗಲಿದ್ದಾರೆ.ಆದಿದ್ರಾವಿಡ ಸಮುದಾಯದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದ ಚಂಡ್ತಿಮಾರ್, ಬಂಟ್ವಾಳ ಪುರಸಭೆಯ ಸದಸ್ಯರಾಗಿ ಶೋಷಿತರ ಪರ ಧ್ವನಿ ಎತ್ತುತ್ತಿದ್ದರು.
ಜನಾರ್ದನ ಚೆಂಡ್ತಿಮಾರ್ ರವರ ಅಗಲುವಿಕೆಯು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಜಿಲ್ಲೆಯ ಒಬ್ಬ ಸಮುದಾಯ ಮತ್ತು ಪಕ್ಷವನ್ನು ಮುನ್ನಡೆಸುವ ಮುಖಂಡರನ್ನು ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಭಾವಪೂರ್ಣ ಶ್ರದ್ದಾಂಜಲಿಯನ್ನು ಸಮರ್ಪಿಸುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಆಪ್ತ ಮುಖಂಡರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಂಡ್ತಿಮಾರ್ ನಿಧನಕ್ಕೆ ನಾನಾ ಮುಖಂಡರು, ಸಮುದಾಯದ ಗಣ್ಯರು, ಶೋಕ ವ್ಯಕ್ತಪಡಿಸಿದ್ದಾರೆ.