ಸಾಧಕರು

POSITIVE STORY: ಪರಿಸರಪ್ರೇಮಿ ಶಿಕ್ಷಕ ಅರವಿಂದ ಕುಡ್ಲ, ಹಕ್ಕಿಮಾಸ್ಟ್ರು ಎಂದೇ ಫೇಮಸ್ಸು

  • ಗಣೇಶ ಪ್ರಸಾದ ಪಾಂಡೇಲು

ARAVINDA KUDLA

ಹೆಸರು ಅರವಿಂದ ಕುಡ್ಲ  ಇವರು ಕಳೆದ ಹತ್ತು ವರ್ಷಗಳಿಂದ ಮೂಡಂಬೈಲು ದ ಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ , ಪರಿಸರ ಕಾಳಜಿ, ಪರಿಸರ ಪ್ರೀತಿ ಇವರ ನೆಚ್ಚಿ ನ ವಿಷಯ. ಹಕ್ಕಿ ಮಾಸ್ಟ್ರು ಎಂದೇ ಗುರುತಿಸಲ್ಪಡುವ ಇವರು ನೈಜ ಪರಿಸರ ಯೋಧ.

ಜಾಹೀರಾತು

ರಾಷ್ಟ್ರಮಟ್ಟದ ಪ್ರಶಸ್ತಿ

2021-22 ರಲ್ಲಿ ವಿಪ್ರೋ ಸಂಸ್ಥೆ ನಡೆಸಿದ ಘನತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಇವರ ಮುಂದಾಳತ್ವದಲ್ಲಿ ಅವರ ಶಾಲೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.ಆ ಪ್ರೋಜೆಕ್ಟ್ ನಲ್ಲಿ ಭಾಗಿಯಾದಾಗಿನಿಂದ ಶಾಲೆಯ ಕಸ ನಿರ್ವಹಣೆ ವ್ಯವಸ್ಥೆಯೇ ಬದಲಾಗಿದೆ.ಹಸಿ ಕಸ,ಒಣಕಸ,ಅಪಾಯಕಾರಿ ಕಸ,ಜೈವಿಕ ವೈದ್ಯಕೀಯ ಕಸ,ಲೋಹದ ಕಸ ಹೀಗೆ ಮಕ್ಕಳು ಕಸವನ್ನು ಪ್ರತ್ಯೇಕಿಸುತ್ತಾರೆ.ಜೊತೆಗೆ ಸೂಕ್ತ ನಿರ್ವಹಣೆ ಮಾಡುತ್ತಾರೆ.ಸುತ್ತಲಿನ ಪರಿಸರವನ್ನು ಸ್ವಚ್ಛಸುಂದರವಾಗಿ ಇಟ್ಟುಕೊಂಡಿದ್ದಾರೆ.ಈ ಕಾರಣಕ್ಕಾಗಿ ಕಳೆದ ಸಾಲಿನಲ್ಲಿ ಚಿಕ್ಕಬಳ್ಳಾಪುರದಿಂದ ಕೊಡಮಾಡುವ ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿಗೆ ಈ ಶಾಲೆ ಪಾತ್ರವಾಗಿದೆ.

ಇವರು  ರೆಡ್ಯೂಸ್,ರೀಯೂಸ್ ರೀ ಸೈಕಲ್( Reduce,Reuse,Recycle )ಗಳ ಮಹತ್ವವನ್ನು ಮಕ್ಕಳಿಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಹಾಗಾಗಿ ಕಸದ ಬುಟ್ಟಿಗೆ ಕಸ ಹಾಕುವ ಮೊದಲು ಮಕ್ಕಳು ಯೋಚಿಸುವಂತಾಗಿದೆ.

OPTIC WORLD

ಚಿಟ್ಟೆ ಸಾಕಿದ ದಾಖಲೆ

ನವಿ ಮುಂಬೈ ಮೂಲದ ಐ ನೇಚರ್ ವಾಚ್ ಫೌಂಡೇಶನ್ ಶಾಲಾ ಮಕ್ಕಳಿಗಾಗಿ ನಡೆಸಿದ ( ಕ್ಯಾಟರ್ ಪಿಲ್ಲರ್ ರೇರಿಂಗ್ ಪ್ರೊಜೆಕ್ಟ್  ‘(caterpillar rearing project’)ನಲ್ಲಿ  ಇವರ ಮಾರ್ಗದರ್ಶನದಲ್ಲಿ ಮಕ್ಕಳು ಕಂಬಳಿಹುಳು ಚಿಟ್ಟೆಯಾಗುವ ಹಂತಗಳನ್ನು ಅನುಭವದ ಮೂಲಕ ಕಲಿತಿದ್ದಾರೆ ಜೊತೆಗೆ ಈ ಕಾರ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಚಿಟ್ಟೆ ಸಾಕಿದ ದಾಖಲೆಗೆ ಗುರುತಿಸಲ್ಪಟ್ಟಿದ್ದಾರೆ.

ಮಕ್ಕಳಿಗೆ ನಾಟಿ ತರಬೇತಿ

ಇವರ ಶಾಲೆಯ ಮಕ್ಕಳನ್ನು ಪ್ರತಿ ವರ್ಷ ಭತ್ತ ನಾಟಿ ಮಾಡುವಲ್ಲಿಗೆ ಕರೆದುಕೊಂಡು ಹೋಗಿ ಮಕ್ಕಳ ಕೈಯಲ್ಲೆ ನೇಜಿ ನೆಡೆಸಿ, ರೈತರೊಂದಿಗೆ ಮಾತುಕತೆಗೆ ಅವಕಾಶ ಒದಗಿಸುವ ಮೂಲಕ ಮಕ್ಕಳಿಗೆ ಒಳ್ಳೆಯ ಜೀವನ ಅನುಭವ ಪಡೆಯಲು ಅವಕಾಶ ಒದಗಿಸಿದ್ದಾರೆ.ಕಳೆದ ವರ್ಷ 1,000 ಭತ್ತದ ತಳಿ ಸಂರಕ್ಷಕ್ಷಿ ಕಾರ್ಕಳ ದ  ಆಸ್ಮಾ ಅವರ ಮನೆಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದ್ದಾರೆ.ಅಲ್ಲಿಂದ  50 ಬೇರೆ ಬೇರೆ ತಳಿಯ ನೇಜಿ ತಂದು ಮಕ್ಕಳು ಚಿಕ್ಕಿ ಡಬ್ಬದಲ್ಲಿ ನೆಟ್ಟು ಸೂಕ್ತ ಆರೈಕೆ ಮಾಡಿ ತಳಿ  ಸಂರಕ್ಷಿಸಲು ಪ್ರೋತ್ಸಾಹಿಸಿದ್ದಾರೆ.

ಅಧ್ಯಯನ ಶೀಲ ಹಕ್ಕಿ ಮಾಸ್ಟ್ರು

‘ಹಕ್ಕಿ ಮಾಷ್ಟ್ರು’ ಎಂದು ಗೆಳೆಯರಿಂದ ಕರೆಯಲ್ಪಡುವ ಇವರು ಹಕ್ಕಿಗಳ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನ ಮಾಡಿದ್ದಾರೆ. ಹಲವು ಶಾಲಾ ಕಾಲೇಜುಗಳಲ್ಲಿ ಹಕ್ಕಿಗೆ ಸಂಬಂಧಪಟ್ಟ ತರಗತಿಗಳನ್ನು ನಡೆಸಿ ಕೊಟ್ಟಿದ್ದಾರೆ. ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಹೆಚ್ಚಿಸುವ ಸಲುವಾಗಿ ಹಲವಾರು ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ಜೇಡ ,ಮರ ,ಅಣಬೆ ,ಪೇಪರ್ ಪೆನ್ ತಯಾರಿ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿದ್ದಾರೆ.

ಮಕ್ಕಳು ಶಾಲೆಯಲ್ಲಿ ಹೊಸ ಕಪ್ಪೆ ,ಜೇಡ ಹಾವು ,ಕೀಟ ಏನೇ ಕಂಡರೂ ಇವರನ್ನು ಹುಡುಕಿಕೊಂಡು ಓಡೋಡಿ ಬರುತ್ತಾರೆ. ಅದನ್ನು ತೋರಿಸಿ ಏನೆಂದು ತಿಳಿದು ಮತ್ತೆ  ತಮ್ಮ ಕೆಲಸಕ್ಕೆ ತೆರಳುತ್ತಾರೆ .

ವಿದ್ಯಾರ್ಥಿಗಳಿಗೆ ‌ಪರಿಸರದ ಮಾಹಿತಿ

ಗಣಿತ – ವಿಜ್ಞಾನ ಶಿಕ್ಷಕರಾದ ಇವರು ಮಕ್ಕಳನ್ನು ಪರಿಸರಕ್ಕೆ ಕರೆದುಕೊಂಡು ಹೋಗಿ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸಿ ಪರಿಸರವನ್ನು  ಸೂಕ್ಷ್ಮವಾಗಿ ಗಮನಿಸುವಂತೆ ಮಾಡಿ ಪರಿಸರ ಪ್ರೀತಿಯನ್ನು ಬೆಳೆಸುತ್ತಿದ್ದಾರೆ .ಇವರ ಮಾರ್ಗದರ್ಶನದಲ್ಲಿ ಮಕ್ಕಳು  ಪರಿಸರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಬಣ್ಣ ಬಣ್ಣದ ಚಿತ್ರ ಕಥಾ ಪುಸ್ತಕಗಳನ್ನು ರಚಿಸಿದ್ದಾರೆ.ಬಿಡುವಿನ ಸಮಯದಲ್ಲಿ ಪರಿಸರಕ್ಕೆ ಸಂಬಂಧಿಸಿದ  ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ತನ್ನ ಪರಿಸರ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.